ತುಂಗಭದ್ರ ಡ್ಯಾಂ ಕ್ರಸ್ಟಗೇಟ್ ಕಿತ್ತಿದ ಸ್ಥಳಕ್ಕೆ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಭೇಟಿ
ಲಿಂಗಸಗೂರು.ಆ.೧೨-
ತುಂಗಭದ್ರಾ ಆಣೆಕಟ್ಟೆಯ ೧೯ ನೇ ಕ್ರಸ್ಟಗೇಟ್ ಮುರಿದಿದ್ದು ಸ್ಥಳಕ್ಕೆ ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳಕ್ಕೆ ಈಗಾಗಲೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರರವರು ಸ್ಥಳಕ್ಕೆ ಭೇಟಿ ನೀಡಿದ್ದು ಇನ್ನು ಕೇವಲ ನಾಲ್ಕು ದಿನದಲ್ಲಿ ಕ್ರಸ್ಟಗೇಟ್ ದುರಸ್ಥಿಗೊಳಿಸಲಾಗುತ್ತದೆ ಯಾವುದೆ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆಯನ್ನು ನೀಡಿದ್ದಾರೆ. ಕೆಲಸವು ಸಮರೋಪಾದಿಯಲ್ಲಿ ಮಾಡಿ ನೀರನ್ನು ತಡೆಹಿಡಿಯುವ ಕೆಲಸವನ್ನು ಮಾಡುವುದರ ಮೂಲಕ ರೈತರ ಬೆಳೆಗಳಿಗೆ ನೀರು ಒದಗಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅದರಂತೆ ಕ್ರಸ್ಟಗೇಟ್ ರಿಪೇರಿಯು ಆದಷ್ಟು ಬೇಗನೆ ಮಾಡುವುದರ ಮೂಲಕ ನೀರಿನ ರಕ್ಷಣೆ ಮಾಡಲಾಗುತ್ತಿದ್ದು ಯಾರು ಆತಂಕಕ್ಕೆ ಒಳಗಾಗಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು.
ತುಂಗಭದ್ರಾ ಜಲಾಶಯದ ೧೯ ನೇ ಕ್ರಸ್ಟಗೇಟ್ ಕೊಚ್ಚಿಹೋಗಿದ್ದು ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಬಳ್ಳಾರಿ, ವಿಜಯನಗರ ಕೊಪ್ಪಳ ರಾಯಚೂರು ಜಿಲ್ಲೆಗಳು ಸಏರಿದಂತೆ ಲಕ್ಷಾಂತರ ಹೆಕ್ಟರ್ ಅಚ್ಚುಕಟ್ಟು ಪ್ರದೇಶದ ಅನ್ನದಾತರಲ್ಲಿ ಆತಂಕ ಮನೆಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದವರು ಯಾವುದೇ ಕಾರಣಕ್ಕೂ ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಸರಕಾರ ತ್ವರಿತವಾಗಿ ಈ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಪಾಮಯ್ಯ ಮುರಾರಿ ಭೂಪನಗೌಡ ಪಾಟೀಲ ಕರಡಕಲ್ ಶಶಿಧರ ಗೌಡ ಆಶಿಹಾಳ ಚನ್ನಾರೆಡ್ಡಿ ಬಿರಾದಾರ ಸೇರಿದಂತೆ ಇತರರು ಇದ್ದರು.