ಮೂಲಭೂತ ಸೌಲಭ್ಯಕ್ಕೆ ಒತ್ತಾಯ
ರಾಯಚೂರು,ಆ೧೨: ಚಂದ್ರಬಂಡಾ ರಸ್ತೆಯಲ್ಲಿರುವ ಆಶ್ರಯ ಕಾಲೋನಿ ಹಾಗೂ ಇತರ ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ಒದಗಿಸಬೇಕೆಂದು ನಗರ ಬ್ಲಾಕ್ ಕಾಂಗ್ರೇಸ್ ಪ್ರಚಾರ ಸಮಿತಿ ಒತ್ತಾಯಿಸಿದೆ.
ಚಂದ್ರಬಂಡಾ ರಸ್ತೆಯಲ್ಲಿರುವ ಆಶ್ರಯ ಬಡಾವಣೆ ಸರ್ವೇನಂ. ೫೭೦/೨, ೫೭೦/೩, ೫೫೮. ೫೫೯/೫೮೪, ೫೯೩, ಹಾಗೂ ಹಳೆ ಜನತಾ ಕಾಲೋನಿ ಸರ್ವೇನಂ, ೬೭೨, ೫೭೩, ೫೭೪, ಗಳಲ್ಲಿ ವಾಸಿಸುತ್ತಿರುವ ಸುಮಾರು ಸಾವಿರಾರು ಕುಟುಂಬಗಳು ೨೦ ವರ್ಷಗಳಿಗೂ ಮೇಲ್ಪಟ್ಟು ಈ ಮನೆಗಳಲ್ಲಿ ನಿವಾಸಿರುತ್ತಾರೆ. ಮೂಲಭೂತ ಸೌಲಭ್ಯಗಳಾದ ಶೌಚಾಲಯ, ರಸ್ತೆ, ಒಳಚರಂಡಿ ಹಾಗೂ ಬೀದಿ ದೀಪಗಳು, ಇಲ್ಲದೇ, ತುಂಬಾ ನರಕಮಯ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದುವರೆಗೂ ಸಂಬಂಧಪಟ್ಟವರು ಯಾರು ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಇಲ್ಲಿನ ನಿವಾಸಿಗಳಿಗೆ ಇದುವರೆಗೂ ಹಕ್ಕು ಪತ್ರಗಳನ್ನು ವಿತರಿಸಿರುವುದಿಲ್ಲಾ. ಕಾರಣ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾಳಾಜಿ ವಹಿಸಿ ಈ ಕೂಡಲೇ ಕ್ರಮಕೈಗೊಂಡು ಈ ಸಮಸ್ಯೆಗಳನ್ನು ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ.
