ಟಿಬಿ ಡ್ಯಾಂಗೆ ಭೇಟಿ ಮನವಿ, ಸಚಿವ ಹೆಚ್‌ಡಿಕೆ ಸ್ಪಂದನೆ
ರಾಯಚೂರು,ಆ೧೨:ಕಳೆದ ಒಂದು ವರ್ಷಗಳಿಂದ ನದಿಯ ತುಂಗಭದ್ರ ಅಣೆಕಟ್ಟು ನೀರಾವರಿ ಇಂಜನಿಯರ್ ಗಳು ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರು ಇಲ್ಲದಿದ್ದಾಗ,ಗೇಟಗಳ ಸಾಮಥ್ರ್ಯ ಪರೀಕ್ಷಿಸಬೇಕಿತ್ತು. ಗೇಟಗಳು ಸರಾಗವಾಗಿ ಕೆಲಸ ಮಾಡಲು ಗ್ರೀಸ್ ಬಿಡಬೇಕಾಗಿತ್ತು. ಉಡಾಫೆ ತೋರಿದ ಕಾರಣ,ರೈತರ ಹೊಲಗಳಿಗೆ ಮತ್ತು ಕುಡಿಯಲು ಅನುಕೂಲವಾಗಬೇಕಿದ್ದ ನೀರು ವ್ಯರ್ಥವಾಗಿ ಹೊಗುತ್ತಿದೆ. ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಠಿಸಿದೆ ಜೆಡಿಎಸ್ ಕಾರ್ಯಾಧ್ಯಕ್ಷ ಶಿವಶಂಕರ್ ವಕೀಲ ಅತಂಕ ವ್ಯಕ್ತಪಡಿಸಿದ್ದಾರೆ.
ಮತ್ತೆ ಈ ಮಟ್ಟದಲ್ಲಿ ಮಳೆ ಬಿಳುವ, ಜಲಾಶಯ ತುಂಬುವ ಅವಕಾಶಗಳು ಕಡಿಮೆ, ನೀರಾವರಿ ಅಧಿಕಾರಿಗಳು ಇದರ ಹೊಣೆ ಹೊರಬೇಕೆಂದು ಜೆಡಿಎಸ್ ಜಿಲ್ಲಾಕಾರ್ಯಾಧ್ಯಕ್ಷ ಎನ್ ಶಿವಶಂಕರ ದೂರಿದರು. ಇಂಜನಿಯರಗಳು ಅದೇ ರೀತಿ ಪ್ರತಿ ವರ್ಷ ಅದರ ನಿರ್ವಹಣೆ ಮಾಡಬೇಕು ಅದನ್ನು ಸಹ ಮಾಡಿರುವುದಿಲ್ಲ ಇದಕ್ಕೆ ಸರ್ಕಾರ ಹಣ ನೀಡಿರುವುದಿಲ್ಲ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ನಾಮಕವಾಸ್ತೆ ಭೇಟಿ ನೀಡಿದ್ದಾರೆ ಅಲ್ಲೇ ವ್ಯಾಸ್ತವ್ಯ ಮಾಡಿ ಸರಿಪಡಿಸಲು ಸೂಕ್ತ ಮಾರ್ಗದರ್ಶನ ನೀಡಬೇಕಾಗಿತ್ತು ಆದರೆ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ,ಈ ಗೇಟಿನಿಂದ ನೀರು ಬಿಡುವುದರಿಂದ ತುಂಗಭದ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ನೆರೆಹಾವಳಿ ಆಗಲಿದೆ. ಎಂದು ತಿಳಿಸಿದ್ದಾರೆ.
ಸದರಿ ಗೇಟ್ ಅನ್ನು ರಿಪೇರಿ ಮಾಡಬೇಕಾದರೆ ತುಂಗಭದ್ರ ನದಿಯ ನೀರನ್ನು ಖಾಲಿ ಮಾಡಬೇಕಾಗುತ್ತದೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಕಷ್ಟ ಅನುಭವಿಸಬೇಕಾಗುತ್ತದೆ. ಸದರಿ ರಾಯಚೂರಿನ ಜಿಲ್ಲೆಯ ರೈತರ ಒಂದು ಲಕ್ಷ ಎಕರೆ ಬೆಳೆ ಹಾನಿ ಆಗಲಿದೆ ರೈತರ ಪರ ಅಪಾರವಾದ ಕಾಳಜಿವುಳ್ಳ ಕೇಂದ್ರ ಸಚಿವ ಕುಮಾರಸ್ವಾಮಿಯವರ ತುಂಗಭದ್ರ ಅಣ್ಣೆಕಟ್ಟುಗೆ ಭೇಟಿ ನೀಡಿ , ಕೇಂದ್ರ ಮತ್ತು ಆಂಧ್ರ ಪ್ರದೇಶದಿಂದ ನುರಿತ ತಜ್ಞರ ಕರೆಸಿ ಶೀಘ್ರ ಸೂಕ್ತ ಪರಿಹಾರ ಮಾಡಿ ರೈತರ ರಕ್ಷಣೆ ಮಾಡಬೇಕೆಂದು ಜೆಡಿಎಸ್ ಜಿಲ್ಲಾ ಘಟಕದ ಮನವಿ ಮಾಡಿದ್ದು ಅದಕ್ಕೆ ಸ್ಪಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಜಿಲ್ಲಾಕಾರ್ಯಾಧ್ಯಕ್ಷ ಎನ್ ಶಿವಶಂಕರ ತಿಳಿಸಿದ್ದಾರೆ.