ಹಿರಿಯ ಭೂ ವಿಜ್ಞಾನಿ ಅಮಾನತ್ ಆಗ್ರಹ
ರಾಯಚೂರು,ಆ.೧೨:ಜಿಲ್ಲೆಯಲ್ಲಿ ಇರುವಂತಹ ಹಿರಿಯ ಭೂ ವಿಜ್ಞಾನಿ ಅವರನ್ನು ತಕ್ಷಣ ಸೇವೆಯಿಂದ ಅಮಾನತ್ ಮಾಡಬೇಕೆಂದು ಅಖಿಲ ಕರ್ನಾಟಕ ರೈತ ಸಂಘ ಒತ್ತಾಯಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜಿಲ್ಲೆಯ ಹಿರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಪುಷ್ಪಲತಾ ಕವಲೂರು ಲೋಕಾಯುಕ್ತ ದಾಳಿಗೆ ಒಳಪಟ್ಟಿರುತ್ತಾರೆ. ಮತ್ತೆ ರಾಯಚೂರು ಜಿಲ್ಲೆಗೆ ವರ್ಗಾವಣೆಯಾಗಿಮಾಡಲಾಗಿದೆ. ಇವರ ಮೇಲೆ ಲೋಕಾಯುಕ್ತ, ಹಾಗೂ ಇಡಿ.ಯಲ್ಲಿ ಪ್ರಕರಣಗಳು ದಾಖಲಾಗಿವೆ, ರಾಯಚೂರು ಜಿಲ್ಲೆಗೆ ಯಾವ ಉದ್ದೇಶಪೂರ್ವಕವಾಗಿ ಇವರಿಗೆ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಜಿಲ್ಲೆಗೆ ಇಂತಹ ಬ್ರಷ್ಟ ಅಧಿಕಾರಿಗಳು ಬೇಡವಾಗಿದ್ದಾರೆ. ಇವರು ಅದೇ ತರಹದ ಬ್ರಷ್ಟಾಚಾರ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇವರ ಪ್ರಕರಣವನ್ನು ಇಡಿ. ಮತ್ತು ಸಿಬಿಐ.ಗೆ ರವಾನಿಸಬೇಕೆಂದು ಒತ್ತಾಯಿಸಿರುವ ಸಂಘಟನೆ ಇವರನ್ನು ಇಲ್ಲಿಂದ ಇವರ ಸೇವೆಯಿಂದ ಅಮಾನತ್ ಗೊಳಿಸಬೇಕು ನಿರ್ಲಕ್ಷ್ಯಸಿದರೆ ನಗರದಲ್ಲಿ ಇಲಾಖೆಯ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಜಿಲ್ಲಾಧ್ಯಕ್ಷ ಹುಸೇನ್ ,ರೈತ ಮಹಿಳಾ ಜಿಲ್ಲಾಧ್ಯಕ್ಷರು ರೂಪಾ ಶ್ರೀನಿವಾಸ ನಾಯಕ .ಜಿಲ್ಲಾ ಉಪಾಧ್ಯಕ್ಷ ಶಿವಶರಣ ಸಾಹುಕಾರ ತಾಲೂಕ ಉಪಾಧ್ಯಕ್ಷ ಗ್ರಾಮ ಘಟಕ ಉಪಾಧ್ಯಕ್ಷ ಜನಾರ್ಧನಗೌಡ್ ದೇವೇಂದ್ರ ನಾಯಕ ,ತಾಲೂಕ ಉಪಾಧ್ಯಕ್ಷ ಗ್ರಾಮೀಣ ವೆಂಕಟೇಶ ಕಮಲಾಪೂರು ಇದ್ದರು.