ಒಳ ಮೀಸಲಾತಿ ಶೀಘ್ರ ಜಾರಿಗೆ ಒತ್ತಾಯ
ರಾಯಚೂರು,ಆ.೧೨: ಕರ್ನಾಟಕ ರಾಜ್ಯದಲಿ. ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಶೀಘ್ರ ಅನುಷ್ಠಾನ ಮಾಡಬೇಕೆಂದು ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕಳೆದ ೩೦ ವರ್ಷಗಳಿಂದ ಮಾದಿಗೆ ರಿಜರ್ವೇಷನ್ ಹೋರಾಟ ಸಮಿತಿ ಮಾಡಿಗೆ ದಂಡೋರ ಇತ್ಯಾದಿ ಸಂಘಟನೆಗಳಿಂದ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಈ ಸಂಘಟನೆ ಗಳಿಂದ ಈಗಾಗಲೇ ಹಲವಾರು ಸಾರಿ ಹೋರಾಟದ ಮೂಲಕ ಸರಕಾರಕೆ, ಒಳ ಮೀಸಲಾತಿ ಜಾರಿ ಕುರಿತು ಮನವಿ ಪತ್ರಗಳನ್ನು ಕೊಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಭಾರತದ ಮಾನ್ಯ ಸರ್ವೋಚ್ಯ ನ್ಯಾಯಾಲಯದಿಂದ ಒಳ ಮೀಸಲಾತಿ ಚಾರಿ ಬಗ್ಗೆ ತೀರ್ಪು ಬಂದಿದ್ದು ಇರುತ್ತದೆ. ಆದುದರಿಂದ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಠ ಜಾತಿಗಳ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಕೋರಲಾಗಿದೆ.ಈಗಾಗಲೇ ಹಲವಾರು ಇಲಾಖೆಗಳಲ್ಲಿ, ಖಾಲಿ ಇರುವ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಲು ಪ್ರಕ್ರಿಯೇ ಚಾಲ್ತಿಯಲ್ಲಿರುತ್ತದೆ. ಈಗ ಭರ್ತಿ ಮಾಡಲಿರುವ ಹುದ್ದೆಗಳಿಗೂ ಬಳ ಮೀಸಲಾತಿ ಅನ್ವಯಿಸುವುದು ಅವಶ್ಯಕತೆ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಮಣ್ಣ,ಗೌರವಾಧ್ಯಕ್ಷ ಗುಂಡಳ್ಳಿ.ಉಪಾಧ್ಯಕ್ಷ ಯಮುನಪ್ಪ ಗಿರಿಜಾಲಿ.ಕಾರ್ಯದರ್ಶಿ ಬಸವರಾಜ ಅತ್ತನೂರು ಸೇರಿದಂತೆ ಇತರೆ ಪದಾಧಿಕಾರಿಗಳ ಇದ್ದರು.