ನದಿ ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿ ರೈತರಿಗೆ ಪರಿಹಾರ ನೀಡಿ: ಮರಲಿಂಗ ಪಾಟೀಲ
ದೇವದುರ್ಗ:ಆ.೧೨-
ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಆಲ್ಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಭರ್ತಿಯಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿ ಬಿಡಲಾಗಿತ್ತು. ಕೃಷ್ಣಾ ನದಿ ನೀರು ನದಿ ಪಾತ್ರದ ಜಮೀನುಗಳಿಗೆ ನುಗ್ಗಿ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟು ಮಾಡಿದ್ದು, ಕೂಡಲೇ ತಾಲೂಕು ಆಡಳಿತ ಸರ್ವೆ ನಡೆಸಿ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ರೈತ ಸಂಘದ ತಾಲೂಕ ಘಟಕದ ಅಧ್ಯಕ್ಷ ಮರಲಿಂಗ ಪಾಟೀಲ ಪತ್ರಿಕೆ ಪ್ರಕಟಣೆ ನೀಡಿ ಸೋಮವಾರ ಒತ್ತಾಯಿಸಿದರು. ಅಲ್ಲದೆ ನದಿ ಪಾತ್ರದ ಗ್ರಾಮಗಳಾದ ವೀರಗೂಟ, ಚಿಂಚೋಡಿ, ಲಿಂಗದಳ್ಳಿ ನೀಲವಂಜಿ, ಅಂಜಳ, ಅಂಚೆ ಸೂಗೂರು, ವಗಡಂಬಳಿ, ಹೂವಿನ ಹಡಗಿ, ಜೋಳದ ಹಡಗಿ, ಮ್ಯಾದರ ಗೋಳು, ಅಪ್ಪಾರಳ, ಸೇರಿದಂತೆ ವಿವಿಧ ಗ್ರಾಮದ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ. ಅಪಾರ ಪ್ರಮಾಣದ ಬೆಳೆ ನಷ್ಟ ಉಂಟು ಮಾಡಿದ್ದು ಕೂಡಲೇ ತಹಸಿಲ್ದಾರ ನೀರು ನುಗಿದ ಜಮೀನುಗಳು ಸರ್ವೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವ ಮೂಲಕ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸದರು. ಇಲ್ಲದೆ ನಿರ್ಲಕ್ಷ ವಹಿಸಿದರೆ. ಮುಂದಿನ ದಿನಗಳಲ್ಲಿ ರೈತರ ಜೊತೆ ಸೇರಿ ಸಂಘಟನೆ ವತಿಯಿಂದ ವಿಧಾನಸೌಧದ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು..