ಹಾರುಬೂದಿಯಿಂದ ಬೆಳೆಗಳಿಗೆ ಹಾನಿ, ಕ್ರಮಕ್ಕೆ ಆಗ್ರಹ
ರಾಯಚೂರು, ಆ.೧೨: ಟೆಕ್ಸಕಾನ್ ಸ್ಟೀಲ್ ಲಿಮಿಟೆಡ್ ಕಂಪನಿಯಿಂದ ಹೊರ ಬರುತ್ತಿರುವ ತ್ಯಾಜ್ಯ ಹಾರುಬೂದಿ ಅವಾಂತರದಿಂದ ರೈತರ ಜಮೀನಿಗೆ ಮತ್ತು ಬೆಳೆಗಳಿಗೆ ಹಾನಿಯಾಗುತ್ತಿದ್ದು ಈ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪರಿಸರ ನಿಯಂತ್ರಣ ಅಧಿಕಾರಿಗಳು ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯದ್ಯಕ್ಷ ಜಿಂದಪ್ಪ ಆಗ್ರಹಿಸಿದರು.
ಕೆ.ಐ.ಎ.ಡಿ.ಬಿ ರಾಯಚೂರು ಗ್ರೋಥ್ ಸೆಂಟರ್ ಚಿಕ್ಕಸುಗೂರಿನಲ್ಲಿ ಕೆಮಿಕಲ್ ಕಂಪನಿಗಳು ಈಗಾಗಲೇ ತಲೆಯೆತ್ತಿದ್ದು ಸುತ್ತಮುತ್ತಲ ರೈತರ ಜಮೀನಗಳು ಬಂಜರು ಭೂಮಿಯಾಗಿ ಮಾರ್ಪಟ್ಟಿವೆ.ಇದರ ಬೆನ್ನಲ್ಲೇ ಟೆಕ್ಸ್ಟ್ ಕಾನ್ ಸ್ಟೀಲ್ಸ್ ಲಿಮಿಟೆಡ್ ಕಂಪನಿಯು ರೈತರ ಜಮೀನಿಗೆ ಮತ್ತು ಬೆಳೆಗಳಿಗೆ ತಲೆ ನೋವಾಗಿ ಪರಿಣಮಿಸಿದೆ ಈ ಕಂಪನಿಯ ತ್ಯಾಜ್ಯ ಬೂದಿ ಬೆಳೆಗಳ ಮೇಲೆ ಬಿದ್ಧ ಪರಿಣಾಮ ಬೆಳೆಗಳು ಕುಂಠಿತವಾಗಿ ಇಳುವರಿ ಸಮಸ್ಯೆ ಯಾಗುತ್ತಿದ್ದು ಹಾಗೂ ಫಲವತ್ತತೆ ಕಳೆದುಕೊಳ್ಳುತ್ತಿವೆ.
ವಡ್ಲೂರು ಗ್ರಾಮದಿಂದ ಅರ್ಧ ಕಿಲೋ ಮೀಟರ್ ಅಂತರದಲ್ಲಿರುವ ಸುಮಾರು ೫೦೦ ಎಕರೆ ಜಾಮೀನುಗಳಿಗೆ ಈ ಕಂಪನಿಯ ತ್ಯಾಜ್ಯ ಬೂದಿ ನೇರವಾಗಿ ಗ್ರಾಮದ ಮೇಲೆ ಬೀಳುತ್ತಿದೆ. ಆದ್ದರಿಂದ ಗ್ರಾಮಸ್ಥರು ಹಲವಾರು ಆರೋಗ್ಯ ಸಮಸ್ಯೆ ಮತ್ತು ತೊಂದರೆ ಅನುಭವಿಸುತ್ತಿರುವ ಎಲ್ಲಾ ರೈತರಿಗೆ ಪರಿಹಾರದೊಂದಿಗೆ ನ್ಯಾಯ ಕೊಡಿಸಬೇಕೆಂದು ಹೇಳಿದರು.