ಮರಳು ಅಕ್ರಮ,ವರದಿಗೆ ಸೂಚನೆ; ರಾಜ್ಯ ಗಣಿ ಇಲಾಖೆ ನಿರ್ದೇಶಕರಿಂದ ಬಳ್ಳಾರಿ ಹೆಚ್ಚುವರಿ ನಿರ್ದೇಶಕರಿಗೆ ಸೂಚನೆ,೧೫ ದಿನ ಗಡವು
ರಾಯಚೂರು,ಆ.೧೨: ದೇವದುರ್ಗಾ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅಕ್ರಮ ಮರಳು ಗಣಿಗಾರಕೆ ಕುರಿತಂತೆ ಸಮಗ್ರ ಮಾಹಿತಿಯುಳ್ಳ ವರದಿ ಸಲ್ಲಿಸುವಂತೆ ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು,ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕರಿಗೆ ಸೂಚಿಸಿದ್ದಾರೆ,
ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಟೆಂಡರ್ ಇಲ್ಲದೇ ಅಕ್ರಮ ಅಕ್ರಮ ಮರಳು ದಾಸ್ತಾನು ಸಂಗ್ರಹಿಸಲು ಹಾಗೂ ವಿಲೇವಾರಿಗೆ ಅಧಿಕಾರಿಗಳೆ ಅವಕಾಶ ಮಾಡಿಕೊಟ್ಟಿದ್ದಾರೆ,ಇದೇ ಕಾರಣಕ್ಕೆ ದೇವದುರ್ಗಾ ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲಿ ಅನಧಿಕೃತ ಮರಳು ಸಾಗಣಿಕೆ ಹೆಚ್ಚಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಗಣಿ ಇಲಾಖೆ ನಿದೇಶಕರಿಗೆ ನೀಡಿದ್ದ ದೂರನ್ನು ಆಧರಿಸಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಸಮಗ್ರ ಮಾಹಿತಿಯುಳ್ಳ ವರದಿಯನ್ನು ೧೫ ದಿನಗಳೊಳಗೆ ನೀಡುವಂತೆ ನಿರ್ದೇಶಕರು ಸೂಚಿಸಿದ್ದಾರೆ.
೧೨ ಟನ್ ಮರಳು ಸಾಗಿಸಲು ಪರವಾನಿಗೆ ಪಡೆದು ೫೦ ಟನ್ ಸಾಮರ್ಥ್ಯದ ಟಿಪ್ಪರ್‌ಗಳಲ್ಲಿ ಮರಳು ಸಾಗಿಸಲಾಗುತ್ತಿದೆ.ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಅಗತ್ಯವಿರುವ ಯಾವ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲ ಎಂದು ದೂರು ನೀಡಲಾಗಿದೆ.
ಜಪ್ತಿ ಮರಳನ್ನು ಪೊಲೀಸ್ ಅಧಿಕಾರಿಗಲೇ ಮಾರಾಟ ಮಾಡಿದ್ದಾರೆ, ಪಟ್ಟಾ ಜಮೀನಿನ ರಾಯಲ್ಟಿ ವಿತರಿಸಿ ನದಿ ಮರಳು ತುಂಬಿಸಲಾಗಿದೆ, ಪಟ್ಟಾ ಜಮೀನಿನಲ್ಲಿ ಮರಳುಗರಿಕೆಯ ಕುರುಹುಗಳಿಲ್ಲ , ಇಲ್ಲಿವರೆಗೆ ದಾಖಲಾದ ಎಲ್ಲಾ ಎಫ್‌ಐಆರ್ ಗಳು ಕೇವಲ ೩೭೯ ಐಪಿಸಿ ಅಡಿ ಆಗಿದೆ. ಎಂಎಂಡಿಆರ್ ದೂರು ದಾಖಲಿಸಿಲ್ಲ, ಅಕ್ರಮ ಮರಳು ದಾಸ್ತಾನು ಇರುವ ಜಮೀನಿನ ಮೇಲೆ ಭೋಜ ಕೂಡಿಸಿಲ್ಲ. ಟೆಂಡರ್ ಇಲ್ಲದ ವಿವಿಧ ೧೮ ಸ್ಥಳಗಳಲ್ಲಿ ಅಂದರೆ ದೇವದುರ್ಗಾದ ತಾಲೂಕಿನ ಲಿಂಗದಹಳ್ಳಿ೧,ಬೆಣಕಲ್೩, ಬಾಗೂರು೧,ಅಂಜಾಳ೧, ಗೋಪಾಳಪುರ೪,ಜೋಳದ ಹೆಡಗಿ೧,ಪರ್ತಾಪುರ೩,ಚಿಕ್ಕರಾಯಕುಂಪಿ೧,ಸೇರಿ ೧೮ ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಸಿಂದನೂರು,ಮಾನವಿ ತಾಲೂಕಿನ ತುಂಗಾಭದ್ರ ನದಿ ಪಾತ್ರಗಳಲ್ಲೂ ಅಕ್ರಮ ಮರಳು ಗಣಿಗಾರಿಕೆಗೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಸಮಿತಿ ಅಧ್ಯಕ್ಷರು ರಚಿಸಿದ್ದ ಗಸ್ತು( ವಿಸಿಲೆನ್ಸ್ ) ತಂಡ ಸಂಪೂರ್ಣ ನಿಷ್ಕ್ರಿಯವಾಗಿದೆ, ತಾಲೂಕು ಮಟ್ಟದ ಮರಳು ಸಮಿತಿ ಮತ್ತು ಜಿಲ್ಲಾ ಮಟ್ಟದ ಮರಳು ಸಮಿತಿ ನಿಯಮಾನುಸಾರ ಸಭೆ ನಡೆಸಿಲ್ಲ ಮತ್ತು ಅವರ ಕರ್ತವ್ಯಗಳನ್ನು ನಿರ್ವಹಿಸಿಲ್ಲ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಯಾವುದೇ ಪಟ್ಟಾ ಜಮೀನು ಗಣಿ ಬ್ಲಾಕ್ ಗಳಲ್ಲಿ ಮತ್ತು ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೇಬ್ರಿಡ್ಜ್ ಗಳು ಕಾರ್ಯನಿರ್ವಹಿಸಲ್ಲ ಎಂದು ಶರಣಪ್ಪ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮರಳು ವಿಲೇವಾರಿಗೆ ಸಂಬಂಧಿಸಿದಂತೆ ಹಸಿರು ಪೀಠದ ನ್ಯಾಯಾಲಯ ಆದೇಶ ಪಾಲಿಸದೇ ನದಿ ಪಾತ್ರದಲ್ಲಿ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ,ಪಟ್ಟಾ ಜಮೀನನಲ್ಲಿ ಮರಳು ಗಣಿಗಾರಿಕೆಗೆ ನೀಡಿರುವ ಪರವಾನಿಗೆ ಬಳಸಿ ನದಿ ಪಾತ್ರಗಳಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾ ಮರಳು ಸಮಿತಿ ಅಧ್ಯಕ್ಷರು ಮರಳು ವಿಲೇವಾರಿಗೆ ಕನಿಷ್ಠ ೨ ತಿಂಗಳಿಗೊಮ್ಮೆಯು ಸಭೆ ಕರೆದಿಲ್ಲ, ಅಕ್ರಮ ಗಣಿಗಾರಿಕೆಯಿಂದ ಅಂತರ್ಜಲ ಕುಸಿದಿದೆ,ನದಿಯ ಹರಿವು ದಿಕ್ಕನ್ನು ಬದಲಿಸಿದೆ ಈ ಎಲ್ಲಾ ಅನಾಹುತಗಳಿಗೆ ಅನಧಿಕೃತ ಮರಳು ಗಣಿಗಾರಿಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೊಟ್ಯಂತರ ರೂ ನಷ್ಟವಾಗಿದೆ.ನದಿ ಪಾತ್ರದಲ್ಲಿ ದಿನ ನಿತ್ಯ ನೂರಾರು ಟಿಪ್ಪರ್‌ಗಳು ಸಂಚಿರಿಸುತ್ತಿವೆ.ಕೆಲವು ಸಂದರ್ಭಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ವಶಪಡಿಕೊಂಡಿದ್ದರೂ,ಟೆಂಡರ್ ಇಲ್ಲದೆ ಮಾರಾಟ ಮಾಡಿ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ ಇದರಿಂದ ನದಿಪಾತ್ರದಲ್ಲಿ ಸಸ್ಯ, ಪ್ರಾಣಿ ಹಾಗೂ ಜಲಚರಗಳ ಜೀವಕ್ಕೆ ಅಪಾಯ ಎದುರಾಗಿದೆ
ಈ ಎಲ್ಲಾ ಅಕ್ರಮಗಳಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಗಣಿ ನಿರ್ದೇಕರಿಗೆ ನೀಡಿರುವ ದೂರನ್ನು ಆಧರಿಸಿ ಈ ಅಕ್ರಮಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ೧೫ ದಿನಗಳಲ್ಲಿ ನೀಡುವಂತೆ ನಿರ್ದೇಶಕರು ಸೂಚಿಸಿದ್ದಾರೆ.
ದೇವದುರ್ಗ, ಮಾನ್ವಿ, ಸಿಂಧನೂರ ಮತ್ತು ಮಸ್ಕಿ ತಾಲೂಕಿನ ಎಲ್ಲಾ ಪಟ್ಟಾ ಜಮೀನುಗಳ ಸ್ಥಳ ಪರಿಶೀಲನೆ ಮಾಡಿ ಗಣಿಗಾರಿಕೆ ನಡೆಸಿದ ಕುರುಹುಗಳನ್ನು ಪರಿಶೀಲನೆ ಮಾಡಬೇಕು ಹಾಗೂ ದೇವದುರ್ಗ ತಾಲೂಕಿನಾದ್ಯಂತ ವಶಪಡಿಸಿಕೊಳ್ಳಲಾದ ಪ್ರತಿಯೊಂದು ಅಕ್ರಮ ಮರಳು ದಾಸ್ತಾನು ಸ್ಥಳಕ್ಕೆ ಭೇಟಿ ನೀಡಿ ಅಳತೆ ಮಾಡಬೇಕು.
–ಶರಣಪ್ಪರೆಡ್ಡಿ, ಸಾಮಾಜಿಕ ಕಾರ್ಯಕರ್ತ