ಶಾರ್ಟ್ ಸಕ್ರ್ಯೂಟ್ : ಟೆಂಟ್ ಹೌಸ್ ಭಸ್ಮ
ಜೇವರ್ಗಿ,ಆ.12-ವಿದ್ಯುತ್ ಶಾಟ್ ಸಕ್ರ್ಯೂಟ್‍ನಿಂದ ಟೆಂಟ್ ಹೌಸ್ ಸುಟ್ಟು ಕರಕಲಾದ ಘಟನೆ ತಾಲೂಕಿನ ಗಂವ್ಹಾರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಶಿವಯ್ಯಸ್ವಾಮಿ ಮಸೂತಿಮಠ ಎಂಬುವರಿಗೆ ಸೇರಿದ ಟೆಂಟ್ ಹೌಸ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಟೆಂಟ್‍ಗೆ ಸಂಭಂದಿಸಿದ ಬಟ್ಟೆ, ನೂರಾರು ಖುರ್ಚಿಗಳು, ನಾಟಕ ಸ್ಟೇಜ್ ಸಾಮಾನುಗಳು, ಸ್ಕ್ರೀನ್‍ಗಳು, ಬ್ಯಾರಲ್, ಕಟ್ಟಿಗೆ ಸಾಮಾನುಗಳು ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು, ಜೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಹಾರಕ್ಕೆ ಒತ್ತಾಯ :ಟೆಂಟ್ ಹೌಸ್‍ನಿಂದ ಜೀವನ ಸಾಗಿಸುತ್ತಿದ್ದ ಶಿವಯ್ಯಸ್ವಾಮಿ ಅವರ ಕುಟುಂಬ ಈ ಘಟನೆಯಿಂದ ಬೀದಿಗೆ ಬಿದ್ದಿದೆ. ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಟೆಂಟ್ ಹೌಸ್ ಮಾಲೀಕರ ಸಂಘದ ಬಸವರಾಜ ಗುಳಗಿ ಒತ್ತಾಯಿಸಿದ್ದಾರೆ.