ರೈತರ ನೀರಿಗೆ ತೊಂದರೆಯಿಲ್ಲ, ಆತಂಕ ಬೇಡ
ರಾಯಚೂರು.ಆ೧೨:ತುಂಗಭದ್ರ ಆಣೇಕಟ್ಟಿನ ೧೯ ನೇ ಗೇಟ್ ನ ಚೈನ್ ಕಟ್ಟಾದ ಮಾಹಿತಿ ತಿಳಿದ ತಕ್ಷಣ ತುಂಗಭದ್ರ ಆಣೇಕಟ್ಟಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್‌ಎಸ್‌ಬೋಸರಾಜು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಸೀಲಿಸಿದರು.
ಶೀಘ್ರ ಕಟ್ಟಾಗಿರುವ ಗೇಟ್ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ರೈತರು ಆತಂಕ ಪಡಬೇಕಾಗಿಲ್ಲ ಜಲಾಶಯದಲ್ಲಿ ನೀರು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಶನಿವಾರ ರಾತ್ರಿ ಗೇಟ್ ಕಟ್ಟಾದ ಮಾಹಿತಿ ತಿಳಿದ ತಕ್ಷಣ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ತಿಳಿಸಿ ಸಂಬಂದಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು ಡ್ಯಾಂ ಪರಿಶೀಲಿಸಿ ಮಿಸಿ ತುಂಗಭದ್ರ ಆಣೆಕಟ್ಟುನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪರಿಶೀಲಿಸಿದರು.
ಶೀಘ್ರ ಗೇಟ್ ದುರಸ್ತಿಗಾಗಿ ತಾಂತ್ರಿಕ ಅಧಿಕಾರಿಗಳ ಸಲಹೆಗಳೊಂದಿಗೆ ಎಲ್ಲಾ ಗೇಟ್ ಗಳನ್ನು ಓಪನ್ ಮಾಡಿಸಿ ೮೦ ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಹೊಸ ಗೇಟ್ ಅಳವಡಿಕೆ ಮಾಡಬೇಕಾದರೆ ೬೦ ರಿಂದ ೫೦ ಟಿಎಂಸಿ ನೀರಿನ ಮಟ್ಟ ಕಡಿಮೆ ಮಾಡಲಾಗುತ್ತಿದೆ. ನೀರಿನ ಪ್ರಮಾಣ ನಿಯಂತ್ರಣದ ನಂತರ ಗೇಟ್ ಕೂಡಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಟ್ ದುರಸ್ತಿ ಕಾಮಗಾರಿ ತ್ವರಿತವಾಗಿ ಮುಗಿಸಿ, ನೀರು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತರು ನೀರು ಇಲ್ಲ ಅಂತ ಆತಂಕ ಪಡಬೇಕಾಗಿಲ್ಲ. ಶೀಘ್ರ ಗೇಟ್ ದುರಸ್ತಿ ಮೂಲಕ ಜಲಾಶಯದಲ್ಲಿ ನೀರು ಉಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎನ್ ಎಸ್ ಬೋಸರಾಜು ತಿಳಿಸಿದರು.
ತುಂಗಭದ್ರಾ ಅಣೆಕಟ್ಟಿಗೆ ೨೮೦೦೦ ಕ್ಯೂಸೆಕ್ ಒಳಹರಿವು ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಈ ಮೂರು ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ೫೦ ಟಿಎಂಸಿ ಅಂದಾಜು ನೀರು ಬರುವ ಅವಕಾಶ ಇದೆ ಎಂದರು.
ಆಣೆಕಟ್ಟು ವೀಕ್ಷಣೆ ನಂತರ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚೆ ಮಾಡಿ ಆದ್ಯತೆ ಮೇರೆಗೆ ಕೆಲಸ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ತುಂಗಭದ್ರ ಬೋರ್ಡ್ ಚೇರ್ಮನ್, ಕರ್ನಾಟಕ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಕೆಎನ್‌ಎನ್ ಎಲ್ ಎಂಡಿ, ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಬಳ್ಳಾರಿ ಸಂಸದ ಇ ತುಕಾರಾಮ್ ನಾಯಕ್, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ಕಂಪ್ಲಿ ಶಾಸಕ ಗಣೇಶ ನಾಯಕ, ಶಾಸಕರಾದ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಪಾಟೀಲ್ ಬಯ್ಯಾಪೂರು, ಆಂದ್ರ ಪ್ರದೇಶದ ಶಾಸಕರು ಹಾಗೂ ಜನಪ್ರತಿನಿಧಿಗಳು ಸೇರಿ ಇನ್ನಿತರ ಸಂಬಂದಪಟ್ಟ ಅಧಿಕಾರಿಗಳು ಇದ್ದರು.