ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಸ
ಕಲಬುರಗಿ,ಆ.12-ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆ.13 ರಂದು ಬೆಳಿಗ್ಗೆ 9.10ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ನಂತರ 10 ಗಂಟೆಗೆ ಸರಡಗಿ ಬ್ಯಾರೇಜ್ ಅಣಕು ಡ್ರಿಲ್ ಪ್ರದರ್ಶನದಲ್ಲಿ ಭಾಗಿಯಾಗುವರು. 12 ಕ್ಕೆ ಹಲಕಟ್ಟಾ ಗ್ರಾಮದಲ್ಲಿ 513 ರೈತರಿಗೆ ಪಹಣಿ ವಿತರಣೆ ಮಾಡುವರು.
ಮಧ್ಯಾಹ್ನ 3.00 ಗಂಟೆಗೆ ಕಲಬುರಗಿಗೆ ಆಗಮಿಸಿ ಡಿಎಆರ್ ವಸತಿ ಪ್ರದೇಶದಲ್ಲಿ ಪೆÇಲೀಸ್ ವಸತಿಗೃಹಗಳ ಕಾಮಗಾರಿಗೆ ಅಡಿಗಲ್ಲು ನೆರವೇರಿಸುವರು. ನಂತರ ನಾಗನಹಳ್ಳಿ ರಸ್ತೆಯಲ್ಲಿ ಬಿಸಿಎಂ ಹಾಸ್ಟೆಲ್ ಉದ್ಘಾಟನೆ, ಹಾಗೂ ಜಿಡಿಎ ಲೇಔಟ್‍ನ ಸಿಐಬಿ ಕಾಲೋನಿಯಲ್ಲಿ ಯೋಗ ಕೇಂದ್ರ ಉದ್ಘಾಟಿಸುವರು.
14 ರಂದು ಬೆಳಿಗ್ಗೆ 11 ಗಂಟೆಗೆ ಆಳಂದ ಪಟ್ಟಣಕ್ಕೆ ತೆರಳುವ ಸಚಿವರು, ನಗರೋತ್ಥಾನ ಹಾಗೂ ಜೆಜೆಎಂ ಅಡಿಯಲ್ಲಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸುವರು. 4 ಗಂಟೆಗೆ ಕಮಲಾಪುರಕ್ಕೆ ಆಗಮಿಸಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗುವರು.
15 ರಂದು ಬೆಳಿಗ್ಗೆ 7.20 ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ನಂತರ 9 ಗಂಟೆಗೆ ಜಿಲ್ಲಾ ಪೆÇಲೀಸ್ ಪರೇಡ್ ಮೈದಾನಕ್ಕೆ ಆಗಮಿಸಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.