ಗಂಗಾನಗರದಲ್ಲಿ ಇಂದಿನಿಂದ ಗುಡ್ಡಾಪೂರ ದಾನಮ್ಮ ದೇವಿ ಪುರಾಣ
ಕಲಬುರಗಿ,ಆ.12-ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ವತಿಯಿಂದ ಆ.12-08 ರಂದು ಸೋಮವಾರ ಸಾಯಂಕಾಲ 7 ಘಂಟೆಗೆ ನಗರದ ಗಂಗಾನಗರದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಂಗವಾಗಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ನಡೆಯಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿಯ ಅಧ್ಯಕ್ಷ ಅನಿಲ್ ಎನ್ .ಕೂಡಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್ ಬಿದನೂರ್ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗೊರಗುಂಡಗಿಯ ವರಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಸುಂಟನೂರಿನ ರೇವಣಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಮಹಾನಗರ ಪಾಲಿಕೆ ಸದಸ್ಯರಾದ ಅನುಪಮಾ ಆರ್.ಕಮಕನೂರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಜೈಪ್ರಕಾಶ್ ಕಮಕನೂರ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷರಾದ ಶಿವಾನಂದ ಹೊನಗುಂಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭೀಮಾಶಂಕರ್ ಫಿರೋಜಬಾದ್, ಪಂಚಪೀಠದ ವಾರ್ತಾಧಿಕಾರಿ ಸಿದ್ದರಾಮಪ್ಪ ಆಲ್ಗೂಡಕರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆ.12 ರಿಂದ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರಾರಂಭವಾಗಲಿದ್ದು ಸೆ.3 ರವರೆಗೆ 21 ದಿನಗಳಕಾಲ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ನಡೆಯಲಿದ್ದು, ಮುದ್ದಡಗಿಯ ರೇಣುಕ ಶಿವಾಚಾರ್ಯರು ಪುರಾಣ ನಡೆಸಿಕೊಡಲಿದ್ದು, ರಾಜ್ಯ ಪ್ರಶಸ್ತಿ ಪುರಸ್ಕøತರಾದ ಬಾಬುರಾವ್ ಕೋಬಾಳ್ ಸಂಗೀತ ಸೇವೆ ಹಾಗೂ ಆಕಾಶವಾಣಿ ಕಲಾವಿದ ಮಹಾಂತೇಶ್ ಹರವಾಳ್ ತಬಲಾ ಸಾತ್ ನೀಡಲಿದ್ದಾರೆ. ಆದ್ದರಿಂದ ಬಡಾವಣೆಯ ನಾಗರಿಕರು, ಗಣ್ಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅನಿಲ ಕೂಡಿ, ಅಶೋಕ ಬಿದನೂರ ಮನವಿ ಮಾಡಿದ್ದಾರೆ.