ಲಾ ಕಾಲೇಜ್ ವಾರ್ಷಿಕೋತ್ಸವ,ಬೀಳ್ಕೊಡುಗೆ
ಕಲಬುರಗಿ.ಆ೧೨-
ಕಲಬುರಗಿ ನಗರದಲ್ಲಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣಸಂಸ್ಥೆಯ ಶೇಠ ಶಂಕರಲಾಲ ಲಾಹೋಟಿ ಕಾನೂನು ಕಾಲೇಜಿನಲಿ ಶನಿವಾರವಾರ್ಷಿಕೋತ್ಸವ ಮತ್ತು ಎಲ್.ಎಲ್.ಬಿ ಐದು ಮತ್ತು ಮೂರು ವರ್ಗಗಳ ಕಾನೂನು ಪದವಿಯ ಅಂತಿಮ ವಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಹೈಕೋರ್ಟ್ ಪೀಠದಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ರಾಗಿರುವ ಬಸವರಾಜ ಚಂಗಟಿರವರು, ಕಳೆದಅರವತ್ತು ವರ್ಷಗಳಿಂದ ಎಸ್.ಎಸ್.ಎಲ್ ಲಾ ಕಾಲೇಜು ಅತ್ಯುತ್ತಮ ಶಿಕ್ಷಣನೀಡುತ್ತಿದೆ. ಇಲ್ಲಿ ಕಲೆತವರು ಲಾಯರ್, ಜಡ್ಜ್ ಗಳು ಕೂಡ ಆಗಿದ್ದಾರೆಎಂದರು.
ಸರ್ವೋಚ್ಚ ನ್ಯಾಯಾಲಯದ ಪ್ರಖ್ಯಾತ ನ್ಯಾಯಮೂರ್ತಿಗಳು ಎಂಬ ಖ್ಯಾತಿಗಳಿಸಿರುವ ಡಾ. ಶಿವರಾಜ್ ಪಾಟೀಲ್ ರವರು ಅಂದಿನ ದಿನಗಳಲ್ಲಿ ಈ ಕಾಲೇಜಿನಪ್ರಾಂಶುಪಾಲರಾಗಿದ್ದರು. ಅವರ ಕೈನಲ್ಲಿ ಕಲೆತ ಅನೇಕರು ಇಂದುದೊಡ್ಡದೊಡ್ಡ ಸ್ಥಾನದಲ್ಲಿದ್ದಾರೆ. ಅನೇಕ ಸಾಧಕರನ್ನು ಹುಟ್ಟು ಹಾಕಿದಕಾಲೇಜು ಇದಾಗಿದೆ.
ಸಾಧಕರ ಹಾದಿಯಲ್ಲಿ ನಾವು ಸಾಗಬೇಕಾಗಿದೆ. ಸಾಧಿಸುವ ಧೃಡ ನಿರ್ಧಾರಮಾಡಬೇಕು. ಶಿಕ್ಷಣ ಮುಗಿದ ತಕ್ಷಣ ಸ್ಟ್ರಗಲ್‌ಮುಗಿಯಿತುಎಂದುಕೊಳ್ಳಬಾರದು. ಮುಂದೆ ಸ್ಟ್ರಗಲ್ ಮಾಡಬೇಕಾಗಿರುತ್ತದೆ.ಕಷ್ಟಪಟ್ಟು ಓದುವ ಬದಲಿಗೆ ಓದುವುದನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದು ಬಸವರಾಜ ಚಂಗಟಿರವರು
ತಿಳಿಸಿದರು.
ಬಳಿಕ ಮಾತನಾಡಿದ ಹೈಕೋರ್ಟಿನ ವಕೀಲರು, ಜಿಬಿಎಕೆ ಘಟಕದಉಪಾಧ್ಯಕ್ಷರಾಗಿರುವ ಅಶೋಕ್ ಬಿ. ಮೂಲ್ಗೆರವರು, ನಾನು ಇದೆ
ಕಾಲೇಜಿನಲ್ಲಿ ಕಲೆತು. ಇದೇ ಕಾಲೇಜಿನ ಕಾರ್ಯಕ್ರಮದಲ್ಲಿಪಾಲ್ಗೊಳ್ಳುತ್ತಿರುವುದು ಖುಷಿ ತಂದಿದೆ. ಶ್ರಮಪಟ್ಟು ಕೆಲಸ ಮಾಡಿದರೆವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಬಹುದಾಗಿದೆ. ಹಣಕ್ಕಾಗಿ ವಕೀಲರು ಕ್ಲೈಂಟ್&ಚಿmಠಿ; ಕೇಸ್ ಗಳನ್ನು ಕಳೆದುಕೊಳ್ಳಬಾರದು. ವಕೀಲ ವೃತ್ತಿಯಂತ
ಶ್ರೇಷ್ಠವಾದದ್ದು ಯಾವುದು ಇಲ್ಲ. ದುಡ್ಡಿಗೆ ಬೆನ್ನತ್ತಬಾರದು. ಕೆಲಸದಮೇಲೆ ಶ್ರದ್ಧೆ ಇರಬೇಕು ಎಂದರು.
ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿನಿ ಶ್ರೇಯಾ ನಿರೂಪಿಸಿದರೆ,ಭೂಮಿಕಾ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಕಾಲೇಜಿನ
ಪ್ರಾಂಶುಪಾಲರಾಗಿರುವ ಮಹೇಶ್ವರಿ ಎಸ್ ಹಿರೇಮಠರವರು ಅತಿಥಿಗಳನ್ನುಸ್ವಾಗತಿಸಿದರೆ, ವಿದ್ಯಾರ್ಥಿನಿ ಮೃಣಾಲಾ ಅತಿಥಿಗಳ ಪರಿಚಯ ಮಾಡಿಕೊಟ್ಟರು.ಉಪನ್ಯಾಸಕಿ, ವಿದ್ಯಾರ್ಥಿ ಸಂಯೋಜಕಿಯಾಗಿರುವ ಕರುಣಾ ಎಸ್ ಪಾಟೀಲ್ ರವರು ವಂದಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳಾದ ಗಣೇಶ್ ಪಾಟೀಲ್, ಗಿರೀಶ್ ಸೇರಿದಂತೆಅನೇಕರು ಅನುಭವ ಹಂಚಿಕೊಂಡರು. ಈ ವೇಳೆ ವ?ದ ಅತ್ಯುತ್ತಮವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಪ್ರಥಮ ಸ್ಥಾನಪಡೆದವರಿಗೆ, ಎನ್.ಎಸ್.ಎಸ್ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರನೀಡಲಾಯಿತು.
ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್‌ಬಸವರಾಜ ಚಂಗಟಿ, ಹೈಕೋರ್ಟಿನ ವಕೀಲರು, ಜಿಬಿಎಕೆ ಘಟಕದ ಉಪಾಧ್ಯಕ್ಷಅಶೋಕ್ ಬಿ. ಮೂಲ್ಗೆ, ಹೆಚ್.ಕೆ.ಇ ಸೊಸೈಟಿ ಕಲಬುರಗಿಯ ಉಪಾಧ್ಯಕ್ಷ ರಾಜ್ ಬಿಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಸ್ ಬಿ ಪಾಟೀಲ್, ನಾಗಣ್ಣ ಗಂಟಿ, ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ವರಿ ಎಸ್
ಹಿರೇಮಠ, ಉಪನ್ಯಾಸಕಿ, ವಿದ್ಯಾರ್ಥಿ ಸಂಯೋಜಕಿ ಕರುಣಾ ಎಸ್ ಪಾಟೀಲ್, ಡಾ.ಜ್ಯೋತಿ ಎಸ್ ಕಡಾದಿ, ಜ್ಯೋತಿ ಅಂಗರಕಿ, ಡಾ. ಸವಿತಾ ಆರ್ ಗಿರಿ ಸೇರಿದಂತೆಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.