ರೈತರಿಗೆ ಸಮರ್ಪಕ ನೀರು ಹರಿಸಿ
ದೇವದುರ್ಗ:ಆ.೧೨-
ತಾಲೂಕಿನ ನಾಗಡದಿನ್ನಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಜಮೀನುಗಳು ತುಂಗಭದ್ರಾ ನದಿ ನೀರಿನಿಂದ ನೀರಾವರಿ ಮಾಡಿಕೊಳ್ಳಲಾಗಿದೆ.ಡ್ಯಾಂ ಗೇಟ್ ಸಮಸ್ಯೆಯಿಂದ ಟೇಲೆಂಡ್ ರೈತರಿಗೆ ಆತಂಕ ಮೂಡಿಸಿದೆ.ಕೂಡಲೇ ನೀರಾವರಿ ಇಲಾಖೆ ಸಮರ್ಪಕವಾಗಿ ನೀರು ಹರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದ್ದಾರೆ.
ಸ್ಥಳೀಯ ವಿಧಾನ ಸಭಾ ಕ್ಷೇತ್ರದ ನಾಗಡದಿನ್ನಿ ಗ್ರಾ.ಪಂ ವ್ಯಾಪ್ತಿಯ ನಾಗಡದಿನ್ನಿ,ಯರಮರಸ,ತಿಪ್ಪಲದಿನ್ನಿ,ನಿಲೋಗಲ್,ಹೆಗ್ಗಡದಿನ್ನಿ ಗ್ರಾಮಗಳ ಸಾವಿರಾರು ಎಕರೆ ಜಮೀನಿನಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯಲಾಗಿದೆ.
ಈಗಾಗಲೇ ರೈತರು ಭತ್ತ,ಹತ್ತಿ,ಮೆಣಸಿನಕಾಯಿ ಬೆಳೆಗಳನ್ನು ಬೆಳೆಯಲು ಪೂರ್ವ ಸಿದ್ದತೆ ಕೈಕೊಂಡಿದ್ದಾರೆ .ಕೆಲ ರೈತರು ಭತ್ತ ನಾಟಿ ಕೂಡ ಮಾಡಿದ್ದಾರೆ.ತುಂಗಭದ್ರಾ ಡ್ಯಾಂ ಗೇಟ್‌ನಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಸಲಾಗಿದೆ.ದುರಸ್ತಿ ಕೂಡ ವಿಳಂಬವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಕಾರಣ ರೈತರಿಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು,ಸಮರ್ಪಕ ನೀರು ಹರಿಸುವ ವ್ಯವಸ್ಥೆ ಮಾಡಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಒತ್ತಾಯಿಸಿದ್ದಾರೆ.