ಟಿಬಿ ಡ್ಯಾಂ ಭದ್ರತೆಗೆ ಒತ್ತಾಯ
ರಾಯಚೂರು,ಆ೧೨:ತುಂಗಭದ್ರ ಜಲಾಶಯದ ೧೯ ನೇ ಕ್ರಸ್ಟ ಗೇಟ ಚೈನ ಉಚ್ಚಿ ಬಿದ್ಸು, ನೀರು ಪೋಲಾಗುತ್ತಿರುವುದಕ್ಕೆ ತುಂಗಭದ್ರ ಜಲಾಶಯದ ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ವಿನೋದರೆಡ್ಡಿ ಎಂ ಆರೋಪಿಸಿದ್ದಾರೆ.
ಈ ಅಧಿಕಾರಿಗಳ ನಿಷ್ಕಾಳಜಿಯಿಂದ ಜಲಾಶಯ ಅವಲಂಬಿತ ರೈತರು ಮತ್ತು ಕುಡಿಯುವ ನೀರು ಗ್ರಾಮ ಮತ್ತು ಹಳ್ಳಿ ಜನ ಆತಂಕಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಾವರಿ ಇಂಜನಿಯರ್ಗಳು ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರು ಇಲ್ಲದಿದ್ದಾಗ, ಗೇಟಗಳ ಸಾಮರ್ಥ್ಯ ಪರೀಕ್ಷಿಸಬೇಕಿತ್ತು. ಗೇಟಗಳ ಸರಾಗ ಓಡಾಟಕ್ಕೆ ಗ್ರೀಸ್ ಆಯಿಲ್ ಬಿಡಬೇಕಾಗಿತ್ತು. ಅತ್ಯಂತ ನಿರ್ಲಕ್ಷ ತೋರಿದ ಕಾರಣ, ರೈತರ ಹೊಲಗಳಿಗೆ ಮತ್ತು ಕುಡಿಯಲು ಅನುಕೂಲವಾಗಬೇಕಿದ್ದ ನೀರು ವ್ಯರ್ಥವಾಗಿ ಹೊಗುತ್ತಿದೆ. ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಠಿಸಿದೆ. ಮತ್ತೆ ಈ ಮಟ್ಟದಲ್ಲಿ ಮಳೆ ಬಿಳುವ, ಜಲಾಶಯ ತುಂಬುವ ಅವಕಾಶಗಳು ಕಡಮೆ, ನೀರಾವರಿ ಅಧಿಕಾರಿಗಳು ಇದರ ಹೊಣೆ ಹೊರಬೇಕೆಂದು ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ರವರಿಗೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇಂಜನಿಯರಗಳ ಕೊರತೆಯೂ ಇಲಾಖೆಯಲ್ಲಿದೆ ತಕ್ಷಣ ಮೂರು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರ ಜಲಾಶಯದ ಭದ್ರತೆಗೆ ವಿನೋದರೆಡ್ಡಿ ಎಂ. ಒತ್ತಾಯಿಸಿದ್ದಾರೆ.