ನಶಾ ಮುಕ್ತ ಭಾರತ ಅಭಿಯಾನಕ್ಕೆ ಬೆಂಬಲಿಸಿ
ರಾಯಚೂರು.ಆ೧೨-
ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕರು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಮೊರೆ ಹೋಗುತ್ತಿದ್ದಾರೆ. ಮೊದಲು ಅದನ್ನ ಹವ್ಯಾಸವಾಗಿ ತೆಗೆದುಕೊಳ್ಳುತ್ತಾರೆ. ನಂತರ ಹವ್ಯಾಸ ಮುಂದುವರೆದು ಆ ಒಂದು ವ್ಯಸನಕ್ಕೆ ಸಂಪೂರ್ಣವಾಗಿ ಒಳಗಾಗುತ್ತಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಡಾ.ದಂಡಪ್ಪ ಬಿರಾದಾರ ಹೇಳಿದರು.
ಅವರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ಉಡ ಮಗಲ ಖಾನಾಪೂರ ನಡೆದ ಮಾದಕ ವಸ್ತುಗಳ ವಿರುದ್ಧ ನಶಾ ಮುಕ್ತ ಭಾರತ ಅಭಿಯಾನಕ್ಕೆ ಪಾಲ್ಗೊಂಡು ಮಾತನಾಡಿದರು.
ಸಿಗರೇಟು ಮಧ್ಯಪಾನ .ಜೊತೆಗೆ ಕೆಲವು ಶಾಲಾ ಕಾಲೇಜುಗಳಲ್ಲಿ ಇಂಜೆಕ್ಷನ್ ಮೂಲಕ ದೇಹಕ್ಕೆ ಡ್ರಗ್ಸ್ ನ್ನ ತೆಗೆದುಕೊಳ್ಳುವಂತಹ ಘಟನೆಗಳು ನಾವು ಸುದ್ದಿ ಮಾಧ್ಯಮದಲ್ಲಿ ನೋಡುತ್ತೇವೆ. ಹೆ೦ಡ .ಸರಾಯಿ. ಪಾನ್ ಪಾನ್ ಪರಾಗ ಗುಟುಗ. ಪಾನ್ ಮಸಾಲ ಇಂತಹ ಸೇವನೆಗಳಿಂದ ದೇಹಕ್ಕೆ ಹಾನಿ ಆಗುತ್ತದೆ ತಾವ್ಯಾರು ಇಂತಹ ಕೆಟ್ಟ ಹವ್ಯಾಸವನ್ನು ರೂಡಿಸಿಕೊಳ್ಳಬಾರದು.ನಶಾ ಮುಕ್ತ ಭಾರತ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ .ನೀವು ರೂಢಿಸಿಕೊಳ್ಳುವ ಒಳ್ಳೆಯ ಅಭ್ಯಾಸವು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತದೆ ದುಷ್ಟಗಳು ರೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ನಿವೇ ಕಪ್ಪು ಚುಕ್ಕೆಯನ್ನು ಹಾಕಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಆದೇಶದಂತೆ ರಾಯಚೂರು ಶಾಲೆಯ ಕನ್ನಡ ಕಲಾ ಶಿಕ್ಷಕರು ಹಾಗೂ ನಂತರ ಇಲಾಖೆಯ ಆದೇಶದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಶಾಲಾ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪರಶುರಾಮ್ ದೈಹಿಕ ಶಿಕ್ಷಣ ಶಿಕ್ಷಕರಾದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದರು .
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ. ಪಾಂಡುರಂಗ ದೇಸಾಯಿ. ಶ್ರೀಮತಿ ನಫೀಜಾ ಅಂಜುಮ. ವೀಣಾ ಕುಲಕರ್ಣಿ ಸಾವಿತ್ರಿ. ಶ್ರೀಮತಿ ಅನಿತಾ ಎನ್ ಪದ್ಮಾವತಿ, ಸರಸ್ವತಿ ಸೇರಿದಂತೆ ಶಾಲಾ ಸಿಬ್ಬಂದಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕೋಮಾರಿ ಗೀತಾ ವಂದಿಸಿದರು.