ನಾಳೆ ಸೇಡಂ ಬಂದ್
ಕಲಬುರಗಿ,ಆ 12: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ಕೊಲೆ ,ದೌರ್ಜನ್ಯ ,ಮಹಿಳೆಯರ ಅತ್ಯಾಚಾರ ಹಾಗೂ ಸೇಡಂ ನಲ್ಲಿ ನಡೆದ ಹಿಂದೂ ಯುವಕರ ಮೇಲೆ ಗುಂಪು ಹಲ್ಲೆ ಖಂಡಿಸಿ ನಾಳೆ ( ಆ.13) ಸೇಡಂ ಬಂದ್ ಗೆ ಕರೆ ನೀಡಲಾಗಿದೆ.ಅದ್ದರಿಂದ ಈ ಬಂದ್ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು , ಮಂಡಲ ಪದಾಧಿಕಾರಿಗಳು,
ಎಲ್ಲಾ ಮೊರ್ಚಗಳ ಪದಾಧಿಕಾರಿಗಳು,ಮಹಾ ಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರದ ಪ್ರಮುಖರು, ಎಲ್ಲಾ ಸ್ತರದ ಚುನಾಯಿತ ಜನಪ್ರತಿನಿಧಿಗಳು,ಬೂತ್ ಅಧ್ಯಕ್ಷರು,ಯುವಕರುಕಾರ್ಯಕರ್ತರು, ಹಿಂದೂ ಬಾಂಧವರು ಬೆಳಿಗ್ಗೆ 10 ಗಂಟೆಗೆಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಕೋರಿದ್ದಾರೆ.