ಬೋವಿ ಸಮಾಜ ಶ್ರೀಗಳ ಪಟ್ಟಾಭಿಷೇಕ ಯಶಸ್ವಿ
ರಾಯಚೂರು.ಆ೧೨-
ಶ್ರೀಇಮ್ಮಡಿ ಸಿದ್ದರಾಮೇಶ್ವರ ಭೋವಿ ಗುರುಪೀಠ ಜಗದ್ಗುರು ಇವರ ೨೫ನೇ ವರ್ಷದ ಗುರುಪೀಠದ ಪಟ್ಟಾಭಿಷೇಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ತ್ತು. ಲಕ್ಷಾಂತರ ಜನ ಸೇರಿ,ಶ್ರೀಗಳ ಪಟ್ಟಾಭಿಷೇಕದ ಸಂತಸ ಹಂಚಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಮತ್ರಿ ಸಿದ್ದರಾಮಯ್ಯ ಆದಿಯಾಗಿ ಸರ್ಕಾರವೇ ಬಂದು ಗುರುಗಳಿಗೆ ಶುಭ ಕೋರಿದ್ದರು. ಸಮಾಜವನ್ನು ಆದರ್ಶದತ್ತ ಒಯ್ಯುತ್ತಿರುವುದಕ್ಕೆ, ಧರ್ಮದ ಸಾರ ಬೋಧಿಸುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.
ಆವತ್ತಿನ ಆ ಧಾರ್ಮಿಕ ಕಾರ್ಯಕ್ರಮಕ್ಕೆ ತನು ಮನ ಧನದಿಂದ ದುಡಿದು ಯಶಸ್ವಿಗೊಳಿಸಿದ್ದಕ್ಕೆ ಪ್ರತಿಯಾಗಿ ಇಂದು ಚಿತ್ರದುರ್ಗದಲ್ಲಿ ಅಭಿನಮದನಾ ಸಮಾರಂಭ ನಡೆಯಿತು. ಆ ಕಾರ್ಯಕ್ರಮ ಯಶಸ್ವಿಗಾಗಿ ಭೋವಿ ಸಮಾಜದ ಈ ಅಭಿನಂದನೆ ಕಾರ್ಯಕ್ರಮದಲ್ಲಿ ರಾಯಚೂರ ಜಿಲ್ಲೆಯ ಭೋವಿ ಒಡ್ಡರ ಮಹಿಳಾ ಘಟಕದ ಕ್ರಿಯಾಶೀಲ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಭೀಮರಾಯ ಭಾಗವಹಿಸಿದ್ದರು. ಅವರಿಗೆ ಗುರುಗಳು ತುಂಬು ಹೃದಯದಿಂದ ಹಾರೈಸಿ, ಸನ್ಮಾನಿಸಿ, ಸಮಾಜದ ಸಂಘಟನೆಯ ಅವಿರತ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಇನ್ನಯ ಹೆಚ್ಚಿನ ಮಟ್ಟದಲ್ಲಿ ಸಮಾಜ ಬಲಿಷ್ಠವಾಗಬೇಕು. ಇತರ ಸಮಾಜದವರ ಜಿತೆ ಸೌಹಾರ್ದತೆಯಿಂದ ಇರಬೇಕು. ಪರಸ್ಪರ ಸಹಾಯ ಸಹಕಾರ ಇರಬೇಕು ಎಂದು ಗುರುಗಳು ಹೇಳಿದರು.
ರಾಯಚೂರು ಜಿಲ್ಲಾ ಬೋವಿ ವಡ್ಡರ ಸಮಾಜದ ಅಧ್ಯಕ್ಷೆ ಶಶಿಕಲಾ ಭೀಮರಾಯ ಮಾತನಾಡಿದರು. ಸಿಂಧನೂರ ತಾಲೂಕಾಧ್ಯಕ್ಷ ಲಕ್ಷ್ಮಣ ಮತ್ತು ಪದ್ಮ ಕರಿಯಪ್ಪ ಮಾಜಿ ನಗರಸಭಾ ಅಧ್ಯಕ್ಷರು ಸಿಂಧನೂರು, ತಾಲೂಕು ಮಹಿಳಾ ಘಟಕ ಅಧ್ಯಕ್ಷರು ಡಿ.ಎಸ್ .ಯಲ್ಲಪ್ಪ ಮಡ್ಡಿಪೇಟ ,ಶಂಕ್ರಪ್ಪ . ಖಜಾಂಚಿ.. ವೆಂಕಟೇಶ್ ತುರವಿಹಾಳ. ಸಿಂಧನೂರು ಹೋಬಳಿ ಘಟಕ ಅಧ್ಯಕ್ಷರು ಮತ್ತು .ಶಾಮಣ್ಣ . ಹನುಮಂತ ಸಾಸಲ ಮರಿ. ಮಾರೆಪ್ಪ ನಾಸಲಪರಿ. ಮಹೇಶ್ ಸರ್ಜಾಪುರ್‌ಇದ್ದರು.