ಹಳ್ಳಿಖೇಡ(ಬಿ): ಹಿಬಾರೆ ಶಾಲೆ, ಮಕ್ಕಳು ಸೆಟಲ್ ಬಾಡ್ಮಿಂಟನ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
ಹುಮನಾಬಾದ್:ಅ.೧: ಸಮೀಪದ ಮಾಣ ಕನಗರ ಮಾಣ ಕ ಪ್ರಭು ಕ್ರಿಡಾಂಗಣದಲ್ಲಿ ನಡೆದ ಹದಿನಾಲ್ಕು ವರ್ಷದ ಒಳಗಿನ ಬಾಲಕಿಯರ ಸೆಟಲ್ ಬಾಡ್ಮಿಂಡನ್ ಕ್ರಿಡೆಯಲ್ಲಿ ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಪ್ರತಿಷ್ಠಿತ ಆಂಗ್ಲ ಮಾಧ್ಯಮದ ಆರ್.ಜಿ. ಹಿಬಾರೆ ಶಾಲೆ ಹಾಗೂ ಎಸ್.ಜಿ. ಹಿಬಾರೆ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಪಾಠಗಳಲ್ಲಿ ಅಲ್ಲದೆ, ಆಟದಲ್ಲೂ ಮುಂಚೂಣ ಯಲ್ಲಿದ್ದಾರೆ. ಎಂದು ತೋರಿಸಿಕೊಟ್ಟಿದ್ದಾರೆ.
ಪ್ರಸಕ್ತ ಸಾಲಿನ ತಾಲ್ಲೂಕಾ ಮಟ್ಟದ ಸೆಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಂಧ್ಯಾ, ಗೌರಿ, ಲಕ್ಷ್ಮಣ ಜಯ ಗಳಿಸಿ, ಜಿಲ್ಲೆ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಅದಲ್ಲದೆ ಹದಿನೇಳು ವರ್ಷದ ಒಳಗಿನ ಬಾಲಕರ ಸೆಟಲ್ ಬ್ಯಾಡ್ಮಿಂಟನ್ ಕ್ರಿಡೆಯಲ್ಲಿ ಎಸ್. ಈ. ಹಿಬಾರೆ ಆಂಗ್ಲ ಮಾಧ್ಯಮ ಫ್ರೌಢ ಶಾಲೆಯ ಸಾಗರ, ಸರ್ವಜ್ಞ, ಸಂದೇಶ, ನಿಹಾಲ್, ಹಾಗೂ ಸಾಯಿನಾಥ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಕ್ಕಳ ಈ ಉತ್ತಮ ಸಾಧನೆಗೆ ಆರ್.ಜಿ. ಹಿಬಾರೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿಬಾರೆಯವರು, ದೈಹಿಕ ಶಿಕ್ಷಕ ಸಾಗರ ಮೇತ್ರೆ ಹಾಗೂ ಪ್ರಾಂಶುಪಾಲರು ಮಕ್ಕಳಿಗೆ ಶುಭಕೊರಿ, ಹರ್ಷವ್ಯಕ್ತ ಪಡಿಸಿದ್ದಾರೆ.