ರೋಗಮುಕ್ತ ಶರೀರಕ್ಕಾಗಿ ವಾಕಿಂಗ್ ಅಗತ್ಯ
ಭಾಲ್ಕಿ:ಅ.೧:ರೋಗಮುಕ್ತ ಶರೀರಕ್ಕಾಗಿ ಪ್ರತಿನಿತ್ಯ ವಾಕಿಂಗ್ ಮಾಡುವುದು ಅಗತ್ಯ ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಪ್ರತಿಪಾದಿಸಿದರು.
ಪಟ್ಟಣದ ಚನ್ನಬಸವಾಶ್ರಮದ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್(ಆರ್‌ಐ ೩೧೬೦) ವತಿಯಿಂದ ಭಾನುವಾರ ಹಮ್ಮಿಕೊಂಡ ವಿಶ್ವ ಹೃದಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರು ಮಾತನಾಡಿದರು.
ನೌಕರಸ್ಥರು,ವರ್ತಕರು,ಕೃಷಿಕರು ಸೇರಿದಂತೆ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲೊAದು ಕಾರ್ಯದಲ್ಲಿ ನಿರತನಾಗಿರುತ್ತಾನೆ.ಹೃದಯ ಕಾಯಿಲೆ ಸಂಬAಧ ಕಿಂಚಿತ್ತು ಚಿಂತನೆ ಮಾಡುವುದಿಲ್ಲ.ಒಮ್ಮೆಲೆ ಹೃದಯಘಾತಕ್ಕೊಳಗಾದಾಗ ಗಾಬರಿಯಾಗುತ್ತಾನೆ.ಕಾರಣ ದಿನದ ೨೪ ಗಂಟೆಯಲ್ಲಿ ಬೆಳಗಿನ ಹೊತ್ತು ಕನಿಷ್ಠ ೩೦ ನಿ.ವಾಕಿಂಗ್ ಮಾಡಿದಲ್ಲಿ ಚೈತನ್ಯ ಭರಿತದಿಂದ ದಿನ ಕಳೆಯಬಹುದು.ವಾಕಿಂಗ್ ಸರ್ವ ರೋಗಕ್ಕೂ ದಿವೌಷಧವಾಗಿದೆ ಎಂದು ತಿಳಿಸಿ,ಪ್ರತಿ ವರ್ಷ ರೋಟರಿ ಕ್ಲಬ್‌ನವರು ಸೆ.೨೯ ರಂದು ವರ್ಲ್ಡ್ ಹಾರ್ಟ್ ಡೇ ಅಂಗವಾಗಿ ವಾಕ್ ಫಾರ್ ಹಾರ್ಟ್ ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿವೆ ಎಂದರು.
ಡಿವಾಯ್‌ಎಸ್‌ಪಿ ಶಿವಾನಂದ ಪವಾಡಶೆಟ್ಟಿ ಬಲೂನ್ ತೋರಿಸುವ ಮೂಲಕ ವಾಕ್ ಫಾರ್ ಹಾರ್ಟ್ಗೆ ಚಾಲನೆ ನೀಡಿದರು.
ಔರಾದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಟಂಕಸಾಲಿ ಮಾತನಾಡಿ,ಬಾಲ್ಯದಿಂದಲೇ ಹೃದಯ ಸಂಬAಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು ಇಂದು ಅಗತ್ಯವಾಗಿದೆ ಎಂದು ಹೇಳಿದರು.ಪ್ರಾಚಾರ್ಯ ಅಶೋಕ ರಾಜೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಯು ವಿಹಾರ ನಡೆ:ಪಟ್ಟಣದ ಚನ್ನಬಸವಾಶ್ರಮದಿಂದ ಆರಂಭಗೊAಡ ವಾಕ್ ಫಾರ್ ಹಾರ್ಟ್ ಬಸವೇಶ್ವರ ವೃತ್,ಗಾಂಧಿ ವೃತ್, ಅಂಬೇಡ್ಕರ್ ವೃತ್ ಮೂಲಕ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ಸಂಜಯಕುಮಾರ ಪಂಡರಗೆರೆ,ಕ್ಲಬ್‌ನ ಕಾರ್ಯದರ್ಶಿ ದತ್ತುಕುಮಾರ ಮೆಹಕರೆ,ಕ್ಲಬ್ ಖಜಾಂಚಿ ಡಾ| ಸಜ್ಜಲ್ ಬಳತೆ, ಮಾಜಿ ಎಜಿಗಳಾದ ಡಾ.ಅಮೀತ ಅಷ್ಟೂರೆ,ಡಾ.ಶಶಿಕಾಂತ ಭೂರೆ, ಡಾ| ನಿತೀನ ಪಾಟೀಲ,ಡಾ.ವಿಜಯಕುಮಾರ ರಾಠೋಡ,ಡಾ.ಹುಲಸೂರೆ, ಪ್ರಾಚಾರ್ಯ ಚಂದ್ರಕಾAತ ಬಿರಾದಾರ,ಸುನೀಲ ಬೆಲಾಳೆ,ಉದ್ಯಮಿ ಕಂಟಿ,ನ್ಯಾಯವಾದಿ ಪ್ರೊ.ಅಮರ ಗಿರಿ,ಅವಿನಾಶ ಮಾಳಗೆ,ಅಶ್ವೀನ ಭೋಸ್ಲೆ,ಡಾ. ಪ್ರಭು ಕೋಟೆÀ,ನ್ಯಾಯವಾದಿಗಳಾದ ಸಾಗರ ನಾಯಕ್, ಶಾಂತನು ಕುಲಕರ್ಣಿ,ವಿಜಯಕುಮಾರ ಪಾಟೀಲ,ಬಸವಾ ಪಾಟೀಲ, ಚೇತನ ಸಂಜಯಕುಮಾರ ಸೇರಿದಂತೆ ಅನೇಕರು ಉತ್ಸಾಹದಿಂದ ಭಾಗವಹಿಸಿದ್ದರು.
`ಹೃದಯ ದೇಹದ ಪ್ರಮುಖ ಅಂಗ.ಅಗತ್ಯ ಮುನ್ನೇಚರಿಕೆಗಳ ಮೂಲಕ ಹೃದಯ ಸಂರಕ್ಷಣೆ ಮಾಡಬಹುದು.ನಿಷ್ಕಾಳಜಿಯಿಂದ ಯುವಕರಿಂದ ವಯೋ ವೃದ್ಧರವರೆಗೆ ಹೃದಯಘಾತಗಳು ಸಂಭವಿಸುತ್ತಲಿವೆ.ಪ್ರತಿ ನಿತ್ಯ ತಪ್ಪದೇ ವಾಕಿಂಗ್ ಮಾಡಿದಲ್ಲಿ ರೋಗಮುಕ್ತ ಜೀವನ ನಡೆಸಬಹುದು.’-ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಭಾಲ್ಕಿ.