ಮಾಜಿ ಸಚಿವ ರಾಜಶೇಖರ್ ಪಾಟೀಲರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಹುಮನಾಬಾದ್: ಅ.೧:ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಸಚಿವ ರಾಜಶೇಖರ್ ಪಾಟೀಲ ಅವರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಸ್ತಾನ ನುರೋದ್ದಿನ್ ಮನ್ನಾಏಖೇಳಿ ಅವರು ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಗೆ ತೆರಳಿ ಬಸವೇಶ್ವರ ಭಾವ ಚಿತ್ರ ನೀಡುವ ಮೂಲಕ ಸನ್ಮಾನಿಸಿ, ಗೌರವಿಸಿ, ಶೂಭ ಕೋರಿದರು. ಕಾಂಗ್ರೆಸ್ ಯುವ ಮುಖಂಡ ಸಂತೋಷ ಕಮಲಪುರ ಮನ್ನಾಎಖೇಳ್ಳಿ, ನಾಗೇಂದ್ರಪ್ಪ ವರವಟ್ಟಿ, ಭೀಮಣ್ಣಾ, ಇದ್ದರು.