ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ
ರಾಯಚೂರು.ಆ೧೨-
ಪ್ರತಿಭೆ ಅನ್ನುವುದು ಯಾರ ಸ್ವತ್ತು ಅಲ್ಲಾ ಎಲ್ಲರಿಗೂ ಸರಿ ಸಮಾನವಾದದ್ದು ನಮ್ಮ ದೇಶದ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯ ಸಂಸ್ಕೃತಿಯಾಗಿದೆ. ಇಂದಿನ ಮಕ್ಕಳಲ್ಲಿ ಆಧುನಿಕತೆಯ ಹಾಗೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುವುದನ್ನು ತಪ್ಪಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು ನಮ್ಮ ದೇಸಿಯ ಸಂಸ್ಕೃತಿಯನ್ನು ಕಲಿಸಿ,ಉಳಿಸಿ, ಬೆಳೆಸಬೇಕು ಪ್ರಕೃತಿಯಿಂದ ಸಂಸ್ಕೃತಿಯ ಕಡೆಗೆ ನಡೆಯಬೇಕೆಂದು ವಿಕಾಸ ಅಕಾಡೆಮಿಯ ಸಂರಕ್ಷ ನಂದಾಪುರ ಶ್ರೀನಿವಾಸ ಹೇಳಿದರು.
ಅವರು ಸೇವಾ ಎಂಪಿ ಪ್ರಕಾಶ ಪದವಿ ಪೂರ್ವ ಕಾಲೇಜು ರಾಯಚೂರು ಹಾಗೂ ಕೊತ್ತಲ ಬಸವೆಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿ ರಾಯಚೂರು ಮತ್ತು ರೋಟರಿ ಸೆಂಟ್ರಲ್ ಕ್ಲಬ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ೭ನೇ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸುವರ್ಣ ಜಯಂತಿ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಯಚೂರು ತಾಲೂಕ ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಡಾ. ಶರಣಬಸವ ಪಾಟೀಲ್ ಜೋಳದ ಹೆಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ರೂಢಿಸಿಕೊಳ್ಳಬೇಕು ಮತ್ತು ನಮ್ಮ ಗ್ರಾಮೀಣ ಹಾಗೂ ದೇಸಿ ಕಲೆಗಳನ್ನು ಉಳಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಿಕೊಳ್ಳಲು ಕರೆ ನೀಡಿದರು.
ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಇದೇ ೨೫ನೇ ತಾರೀಕ ನಂದು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವರು ಎಂದರು. ಈ ಕಾರ್ಯಕ್ರಮದಲ್ಲಿ ನಾಲ್ಕು ಸ್ಪರ್ಧೆಗಳಿದ್ದು ಶಾಸ್ತ್ರೀಯ ನೃತ್ಯ ಸಂಗೀತ, ಹಗ್ಗ ಜಿಗಿದಾಟ, ಭಜನಾಪದ, ಕೋಲಾಟ ಸ್ಪರ್ಧೆಯನ್ನು ವಿದ್ಯಾಭಾರತಿ ಸಿಬಿಎಸ್‌ಎಸ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು ಅದರಲ್ಲಿ ಪ್ರಥಮ ದ್ವಿತೀಯ ತೃತೀಯ ಪಡೆದುಕೊಂಡ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ, ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ವಿಶ್ವನಾಥ ಕೋರಿ, ರೇಖಾ ಬಡಿಗೇರ್, ಮೋನಿಕಾ ಶರಣಪ್ಪ ಗೋನಾಳ್, ಪ್ರತಿಭಾ ಗೋನಾಳ್, ಬಸವರಾಜ ಎಲಿ, ಭೀಮರಾಯ ರಸ್ತಾಪುರ, ಜಿತೇಶ್, ಜಿಗರ್ಕಲ್ ಹನುಮಂತ ಕೃಷ್ಣಮೂರ್ತಿ, ನಜಿರ್, ಅಕ್ಷಯ ನಿರ್ಮಲ ಹಿರೇಮಠ,ರಾಜಶೇಖರ್ ಹಿರೇಮಠ್, ಶಿವಕುಮಾರ್ ವಿದ್ಯಾ ಭಾರತೀಯ ಶಾಲಾ ಸಿಬ್ಬಂದಿ ವರ್ಗ, ಪಿ ಬಸವರಾಜ, ಪ್ರಬಣ್ಣ ಗೌಡ, ಹೆಚ್ ಹೆಚ್ ಮ್ಯಾದರ್, ಸುಭಾಷ್ ಚಂದ್ರ ಪಾಟೀಲ್, ಆರ್ ಮಲ್ಲನಗೌಡ, ಬಸವರಾಜ ಎಲಿ, ಎಂ ಜಿ ಮಾರುತಿ, ಶಿವಕುಮಾರ್, ದಾನಮ್ಮ ಸುಭಾಷ್ ಚಂದ್ರ, ಪ್ರತಿಭಾ ಗೋನಾಳ, ಮಹಾಲಕ್ಷ್ಮಿ, ರಾಜಶೇಖರ್ ಹಿರೇಮಠ್, ನಿರ್ಮಲ ಹಿರೇಮಠ, ಮಂಜುನಾಥ ರಾಯಚೂರು ತಾಲೂಕಿನ ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು, ಉಪನ್ಯಾಸಕರು ಸಿಬ್ಬಂದಿ ವರ್ಗದವರು, ತೀರ್ಪುಗಾರರು ಇನ್ನಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜಶೇಖರ್ ಹಿರೇಮಠ ನಿರ್ವಹಿಸಿದರು. ರೇಖಾ ಬಡಿಗೇರ್ ನಿರೂಪಿಸಿದರು