ದೇಶಭಕ್ತಿ ಗೀತೆ ಗಾಯನ;ಎಸ್‌ವಿಎಸ್ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ
ಮಾನ್ವಿ.ಆ೧೨-
ಮಾನ್ವಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಗರದ ಪಂಪಾ ಹೌಸಿಂಗ್ ಕಾಲೋನಿಯ ಎಸ್ ವಿ ಎಸ್ ಶಾಲೆಯ ಗೈಡ್ ವಿದ್ಯಾರ್ಥಿಗಳು ತಮ್ಮ ಉತ್ತಮ ಗಾಯನದಿಂದ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಗೈಡ್ ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಶಾಲೆಯ ಕಾರ್ಯದರ್ಶಿ ಅಂಜನ ರೆಡ್ಡಿ, ಆಡಳಿತಾಧಿಕಾರಿ ಅನುಷಾ,ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಸ್ಕೌಟ್ ಮಾಸ್ಟರ್ ಮಾಲಕಣ್ಣ,ಶಿಕ್ಷಕ ವಿಶ್ವನಾಥ್ ಗೌಡ ಸೇರಿದಂತೆ ಇತರೆ ಶಿಕ್ಷಕರು,ಬೋಧಕೇತರ ಸಿಬ್ಬಂದಿ, ಪಾಲಕರು ಅಭಿನಂದಿಸಿ ಶ್ಲಾಘಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಂಜನ ರೆಡ್ಡಿ ಅವರು ಮಕ್ಕಳ ಈ ಸಾಧನೆ ಇತರೆ ವಿದ್ಯಾರ್ಥಿಗಳಿಗೆ ಮಾದರಿ.ಮುಂದಿನ ದಿನಗಳಲ್ಲಿ ಮಕ್ಕಳು ಇನ್ನೂ ಹೆಚ್ಚಿನ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.