ಪಬ್ಲಿಕ್ ಸ್ಕೂಲ್ ಬುಲ್ ಬುಲ್ ಮಕ್ಕಳಿಗೆ ಪ್ರಥಮ ಸ್ಥಾನ
ಮಾನ್ವಿ.ಆ೧೨-
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾನವಿ ವತಿಯಿಂದ ನಗರದ ಕಾಕತಿಯ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕ ಮಟ್ಟದ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾನವಿ ಪಬ್ಲಿಕ್ ಸ್ಕೂಲ್, ಬುಲ್ ಬುಲ್ ಮಕ್ಕಳು ಚೆನ್ನಾಗಿ ಗೀತೆ ಗಾಯನ ಮಾಡಿ ತೀರ್ಪುಗಾರರ ಮನಸೆಳೆದು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೇಧಾ ದೇಸಾಯಿ, ವೈಷ್ಣವಿ ದೇಸಾಯಿ, ಕೀರ್ತನ ಗದ್ವಾಲ್ಸೌ,ಮ್ಯ, ಅರ್ಫಾ ಫಿರ್ಡಾಸ್, ರೀಫಾ ಫಾತಿಮಾ, ಆನಂ ಮೆಹಂದಿ, ಸ್ಪಂದನ ಜ್ಯೋತಿ ಸ್ಪರ್ಧೆಯಲ್ಲಿ ಮಾನ್ವಿ ಪಬ್ಲಿಕ್ ಸ್ಕೂಲ್ ಅನ್ನು ಪ್ರತಿನಿಧಿಸಿದ್ದರು. ಬುಲ್ ಬುಲ್ ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಕಾರ್ಯದರ್ಶಿ ಸೈಯದ್ ಮುಜಾತಬ ಖಾದ್ರಿ, ಮುಖ್ಯ ಗುರುಗಳು ನಾಗರತ್ನ ದೇಸಾಯಿ, ದೈಹಿಕ ಶಿಕ್ಷಣ ಶಿಕ್ಷಕ ಅಂಬಣ್ಣ ನಾಯಕ್, ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕಿ ಪೂಜಾ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ, ಇತರೆ ವಿದ್ಯಾರ್ಥಿಗಳು, ಪಾಲಕರು ಅಭಿನಂದಿಸಿ ಶ್ಲಾಘಿಸಿದ್ದಾರೆ.