ಉತ್ತರ ಕರ್ನಾಟಕದಲ್ಲಿ ಮಾತ್ರ ಗಮಕ ಉಳಿದಿದೆ : ಕಲ್ಯಾಣರಾವ್ ದೇಶಪಾಂಡೆ
ವಿಜಯಪುರ,ಆ.12:”ಕುಮಾರವ್ಯಾಸ, ಕುಮಾರವಾಲ್ಮೀಕಿ ,ರನ್ನ ,ಪಂಪ ,ನಾಗಚಂದ್ರ ಮುಂತಾದ ಕವಿಗಳು ಸೇರಿದಂತೆ ಕಾವ್ಯ ಬರೆದವರು ಉತ್ತರ ಕರ್ನಾಟಕ ಭಾಗದವರು. ಉತ್ತರ ಕರ್ನಾಟಕದಲ್ಲಿ ಮಾತ್ರ ಗಮಕ ಉಳಿದಿದೆ. ಆದರೆ, ಅದನ್ನು ವಾಚನ ಮಾಡುತ್ತಿರುವವರು ಬೆಂಗಳೂರು, ಮೈಸೂರಿನವರು ‘ಎಂದು ಕಲ್ಯಾಣರಾವ್ ದೇಶಪಾಂಡೆ ಹೇಳಿದರು.
ಭಾನುವಾರ ನಗರದ ಬಿಡಿಇ ಸೊಸೈಟಿಯಲ್ಲಿ ಅಖಿಲ ಭಾರತೀಯ ‘ಸಾಹಿತ್ಯ ಪರಿಷದ್(ರಿ) ವಿಜಯಪುರ’ ಗುರುಪೂರ್ಣಿಮ ಅಂಗವಾಗಿ ಆಯೋಜಿಸಿದ ‘ಕುಮಾರವ್ಯಾಸ ಭಾರತ ಗಮಕ’ ಕಾರ್ಯಕ್ರಮದಲ್ಲಿ ಹಿರಿಯ ಗಮಕಿಗಳಾದ ಶಾಂತಾಬಾಯಿ ಕೌತಳಾ ಕುಮಾರವ್ಯಾಸ ಭಾರತದ ವಿರಾಟ ಪರ್ವದ ಕಾವ್ಯವನ್ನು ಗಾಯನ ಮಾಡಿದರು. ಕಲ್ಯಾಣರಾವ್ ದೇಶಪಾಂಡೆ ಅದನ್ನು ವ್ಯಾಖ್ಯಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಲ್ಲಿ ವಿಜಯಪುರದÀಲ್ಲಿ ಮಾತ್ರ ಗಮಕ ಉಳಿದಿದೆ ಎಂದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಾಗಿದ್ದ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆಯ ಅಧ್ಯಕ್ಷ ಅಮರೇಶ ಸಾಲಕ್ಕಿ ಮಾತನಾಡಿ’ ಸಾಹಿತ್ಯ ಪ್ರಕಾರದಲ್ಲಿ ಗಮಕ ಅತ್ಯಂತ ಪವಿತ್ರವಾದ ಪ್ರಕಾರವಾಗಿದ್ದು ಇದನ್ನು ಮುಂದಿನ ಪೀಳಿಗೆಗೂ ತಲುಪಿಸುವ ನಿಟ್ಟಿನಲ್ಲಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ’ ಪ್ರಯತ್ನವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಾರಾಯಣ ಬಾಬಾನಗರ ಅವರು ಮಾತನಾಡಿ, ಸಾತ್ವಿಕ ಸಾಹಿತ್ಯ ಮತ್ತು ರಾಷ್ಟ್ರದ ಏಕತೆ ದೃಷ್ಠಿಯಿಂದ ಅಭಾಸಾಪ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಶ್ರೀರಂಗ ಕುಲಕರ್ಣಿ ಸ್ವಾಗತಿಸಿದರು. ರಾಹುಲ್ ಮರಳಿ ನಿರೂಪಿಸಿದರು. ಮಯೂರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಿ.ಆರ್ ಕುಲಕರ್ಣಿ , ಬಿ.ಎಮ್ .ಪಾಟೀಲ. ಸರಸ್ವತಿ ಕುಲಕರ್ಣಿ , ಪುಷ್ಪ ಕುಲಕರ್ಣಿ, ಮೋಹನ ಕೌತಾಳ , ಬಾಬುರಾವ್ ಕುಲಕರ್ಣಿ, ಅನಿಲಕುಮಾರ ಮಾಶ್ಯಾಳಕರ , ಕೇಶವ ಕುಲಕರ್ಣಿ , ಬಲವಂತರಾವ ಕುಲಕರ್ಣಿ, ಶ್ರೀರಂಗ ಪುರಾಣಿಕ, ಅರುಣ ಕುಲಕರ್ಣಿ, ಓಂಕಾರ ಅಥರ್ಗಾ, ಸಂತೋಷ ಕಳ್ಳಿಗುಡ್ಡ, ಸಂತೋಷ ಜೋಶಿ, ಶಿವಾನಂದ ಕೂಸೂರ ಮುಂತಾದವರು ಉಪಸ್ಥಿತರಿದ್ದರು.