ಸಚಿವ ಎಂ.ಬಿ. ಪಾಟೀಲರಿಗೆ ರಕ್ಷಾ ಬಂಧನ ಶುಭ ಹಾರೈಕೆ
ವಿಜಯಪುರ,ಆ.12: ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ ರಕ್ಷಾ ಬಂಧನದ ಅಂಗವಾಗಿ ಶುಭಕೋರಿದರು.
ನಗರದಲ್ಲಿರುವ ಸಚಿವರ ಗೃಹ ಕಚೇರಿಗೆ ಭಾನುವಾರ ಬೆಳಿಗ್ಗೆ ಆಗಮಿಸಿದ ದರ್ಗಾ ಬಳಿಯ ಈಶ್ವರಿಯ ವಿಶ್ವವಿದ್ಯಾಲಯ ಜ್ಞಾನಗಂಗಾ ಭವನದ ಸರೋಜಾ ಮತ್ತು ಕವಿತಾ ಸಹೋದರಿಯರು ಸಚಿವರ ಹಣೆಗೆ ತಿಲಕ ಹಚ್ಚಿ, ರಾಖಿಕಟ್ಟಿ ಶುಭಾಷಯ ಕೋರಿದರು. ಸಚಿವರೂ ಕೂಡ ಸಹೋದರಿಯರೊಂದಿಗೆ ರಕ್ಷಾ ಬಂಧನ ಶುಭಾಷಯ ವಿನಿಮಯ ಮಾಡಿಕೊಂಡರು.