ಲಯನ್ಸ್ ಪರಿವಾರ ಸಂಸ್ಥೆಗೆ ಬೆನ್ನೆಲುಬು ಆಗುವೆ: ಶೈಲಜಾ ಪಾಟೀಲ
ವಿಜಯಪುರ,ಆ.12: ಲಯನ್ಸ್ ಕ್ಲಬ್ ಬಿಜಾಪುರ ಪರಿವಾರ ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆಯುವುದರ ಮೂಲಕ ಪರಿಚಿತಗೊಂಡಿದೆ. ಈ ಸಂಸ್ಥೆಯು ಪ್ರತಿಯೊಂದು ಕಾರ್ಯಕ್ರಮವು ಸಮಾಜದ ಬೆಳವಣಿಗೆಗೆ ಪ್ರೇರಣೆಯಾಗಿವೆ. ಆದ್ದರಿಂದ ನಾನು ಸಾಮಾಜಿಕ ಕ್ಷೇತ್ರದಲ್ಲಿ ಪಾಲ್ಗೊಂಡು ಲಯನ್ಸ್ ಪರಿವಾರ ಸಂಸ್ಥೆಗೆ ಬೆನ್ನೆಲಬಾಗಿ ನಿಲ್ಲುತ್ತೇನೆ ಎಂದು ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ಅವರು ಹೇಳಿದರು.
ನಗರದ ಹೊರ ವಲಯದಲ್ಲಿರುವ ಸೊಲ್ಲಾಪೂರ ರಸ್ತೆಯ ಅಪ್ಸರಾವಾಡದಲ್ಲಿ ಲಯನ್ಸ್ ಕ್ಲಬ್ ಬಿಜಾಪುರ ಪರಿವಾರದ 2024-25ನೇ ಸಾಲಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ನಾವು ಸಮಾಜಕ್ಕೆ ದಿನನಿತ್ಯ ಏನಾದರೂ ಕೊಡುಗೆ ಕೊಟ್ಟರೆ ನಮ್ಮ ಬದುಕಿಗೆ ಒಂದು ಅರ್ಥ ಸಿಗುತ್ತದೆ. ಹೀಗಿರುವ ನಾವೆಲ್ಲರೂ ಸೇರಿಕೊಂಡು ಸುಂದರ ಸಮಾಜ ನಿರ್ಮಿಸುವಲ್ಲಿ ಕಾರ್ಯರೂಪ ಕೈಗೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಲಯನ್ ಎಮ್.ಜೆ.ಎಫ್ ಮಹೇಶ ದರಬಾರ ಮಾತನಾಡಿ, ಲಯನ್ಸ್ ಕ್ಲಬ್ ಬಿಜಾಪುರ ಸಂಸ್ಥೆಯಲ್ಲಿ ಪಾಲ್ಗೊಂಡ ಪದಾಧಿಕಾರಿಗಳಿಗೆ ಇದರಿಂದ ಯಾವುದೇ ಲಾಭವಿಲ್ಲ. ಆದರೆ ಸಂಸ್ಥೆಯಿಂದ ಸಮಾಜಕ್ಕೆ ಸಾಕಷ್ಟು ಲಾಭಗಳಿವೆ. ಯಾವುದೇ ಪಲಾಫೇಕ್ಷ ಬಯಸದೇ ಸರ್ವ ಪದಾಧಿಕಾರಿಗಳು ಅಧ್ಯಕ್ಷರು ಶ್ರಮ ವಹಿಸಿ ಸುಂದರವಾದ ಸಮಾಜಕ್ಕೆ ಕಾರಣಿಕರ್ತರಾಗಿದ್ದಾರೆ. ಇದರಿಂದ ನಾವೆಲ್ಲರೂ ಈ ಸಂಸ್ಥೆಗೆ ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ನಮ್ಮದು ಬೆಂಬಲವಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇನ್ನೋರ್ವ ಅತಿಥಿಯಾಗಿ ಲಯನ್ ಎಮ್.ಜೆ.ಎಫ್ ಬಿ.ಕೆ. ಕನ್ನೂರ ಮಾತನಾಡಿ, ಅಂತರಾಷ್ಟ್ರೀಯ ಸಂಸ್ಥೆಯಾದ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಸಮಾಜದ ಯುವ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಪ್ರೊ. ಎಮ್.ಬಿ. ರಜಪೂತ ಮಾತನಾಡಿ, ನಮ್ಮಿಂದ ಆಗದ ಕೆಲವು ಸಮಾಜಮುಖಿ ಕೆಲಸ ಮುಂಬರುವ ವರ್ಷದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಕೈ ಜೋಡಿಸಿಕೊಂಡು ಕೆಲಸ ಮಾಡಲು ಅಣಿಯಾಗುತ್ತೇವೆ ಎಂದು ಹೇಳಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾಗಿ ಡಾ. ಅಶೋಕಕುಮಾರ ಜಾಧವ, ಸಿ.ಎಸ್. ನಿಂಬಾಳ, ವಾಲು ಚವ್ಹಾಣ, ಎಂ.ಬಿ. ರಜಪೂತ, ಎಚ್.ಎಸ್. ರಾಜಮಾನೆ, ಡಾ.ಬಾಬು ರಾಜೇಂದ್ರ ನಾಯಕ, ಬಿ.ಎನ್. ಬಿರಾದಾರ, ಎ.ಎಸ್. ಕುಲಕರ್ಣಿ, ಎಸ್.ಆರ್. ಕಟ್ಟಿ, ಎಚ್. ಕಲಾದಗಿ, ಎ.ಆರ್. ಲಮಾಣಿ, ರಾಜೇಶ ಗಾಯಕವಾಡ, ಸಾಧಿಕ ಜಾನ್ವೇಕರ, ವಿದ್ಯಾ ಕೋಟೇನವರ, ರಜನಿ ಸಂಬಣ್ಣಿ, ಜಯಶ್ರಿ ಲದ್ವಾ, ತಾರಾಸಿಂಗ್ ದೊಡಮನಿ, ನಿರ್ದೇಶಕರನ್ನಾಗಿ ಎಸ್.ಎಸ್. ಗಂಗನಳ್ಳಿ, ಡಾ. ರವಿಂದ್ರ ಮದರಕಿ, ಡಾ. ಅಶೋಕ ನಾಯಕ, ಡಾ. ಅಶೋಕ ಬಿರಾದಾರ, ಪ್ರಕಾಶ ದರಬಾರ, ಡಾ. ಗೀರಿಶ ಕುಲೊಳ್ಳಿ, ಡಾ. ರವಿ ನಾಯಕ, ಡಾ. ನಚಿಕೇತ ದೇಸಾಯಿ, ಶಾಂತಾ ಉತ್ಲಾಸರ, ಸದಸ್ಯರನ್ನಾಗಿ ಶೈಲಾ ಪಾಟೀಲ ಶ್ರೀದೇವಿ ಲೋಗಾವಿ, ಇಂದುಮತಿ ಕನ್ನೂರ, ಅನುಶಾ ನಿಂಬರಗಿ, ಮೀನಾಕ್ಷಿ ಪತ್ತಾರ, ಚಿದಾನಂದ ಸಂಬಣ್ಣಿ, ಧರ್ಮರಾಯ ಮಮದಾಪೂರ, ಸಿದ್ದನಗೌಡ ಪಾಟೀಲ ಆಯ್ಕೆಯಾದರು.
ಡಾ. ಅಶೋಕ ಜಾಧವ ಸ್ವಾಗತಿಸಿ, ನಿರೂಪಿಸಿದರು. ಶ್ರೇಯಸ್ ಮಹೇಂದ್ರಕರ ವಂದಿಸಿದರು.