ಪ್ರೊ. ರಾಜೇಂದ್ರ ಅವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ : ಪ್ರೊ. ಹೆಬ್ಬಾಳೆ
ಬೀದರ: ಆ.12:ಶಿಕ್ಷಕ, ಸೈನಿಕ, ಆರಕ್ಷಕ ಮತ್ತು ರೈತ ಈ ನಾಲ್ಕು ಜನರ ಮೇಲೆ ದೇಶದ ಭವಿಷ್ಯ ನಿಂತಿದೆ. ಮಾನವ ಸಂಪನ್ಮೂಲ ತಯಾರಿಕೆಯಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಒಂದು ಕಟ್ಟಡ ಹಾಳಾಗಬಹುದು. ಒಬ್ಬ ವೈದ್ಯ ತಪ್ಪು ಮಾಡಿದರೆ ಒಂದು ಜೀವ ಹೋಗಬಹುದು, ಒಬ್ಬ ವಕೀಲ ತಪ್ಪು ಮಾಡಿದರೆ ಒಬ್ಬರಿಗೆ ನ್ಯಾಯ ಸಿಗದೇ ಇರಬಹುದು. ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಇಡೀ ದೇಶದ ಭವಿಷ್ಯವೇ ಬುಡಮೇಲಾಗುತ್ತದೆ. ಹೀಗಾಗಿ 36 ವರ್ಷಗಳ ಕಾಲ ಪ್ರಾಧ್ಯಾಪಕ ಹುದ್ದೆಯಲ್ಲಿದ್ದುಕೊಂಡು ನಿಸ್ವಾರ್ಥ ಜೀವನ ನಡೆಸಿದ ಪೆÇ್ರ. ರಾಜೇಂದ್ರ ಬಿರಾದಾರ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಕೆ.ಸಿ.ವೀರಣ್ಣ ತಿಳಿಸಿದರು. ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಬಿರಾದಾರ ಪರಿವಾರದ ವತಿಯಿಂದ ನಗರದ ಎ.ಕೆ.ಕಾಂಟಿನೆಂಟಲ್ ಸಭಾಂಗಣದಲ್ಲಿ ಪೆÇ್ರ. ರಾಜೇಂದ್ರ ಬಿರಾದಾರ ಅವರ ವಯೋನಿವೃತ್ತಿ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಿವೃತ್ತಿಯ ನಂತರ ಎಲ್ಲರೂ ತಮ್ಮ ಜೀವನವೇ ಮುಗಿಯಿತು ಎಂದುಕೊಳ್ಳುತ್ತಾರೆ. ಆದರೆ ಹಾಗೆ ಅಂದುಕೊಳ್ಳದೇ ಇದುವೆ ಜೀವನದ ಆರಂಭ ಎಂದುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ರಾಜೇಂದ್ರ ಅವರ ಬದುಕು ಸದಾ ಕ್ರಿಯಾಶೀಲವಾದುದ್ದು. ತಮ್ಮ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿಗಳಿಂದ ಸನ್ಮಾನಿತರಾಗಿದ್ದಾರೆ. ಹೀಗಾಗಿ ಭಗವಂತ ಅವರಿಗೆ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪೆÇ್ರ. ಜಗನ್ನಾಥ ಹೆಬ್ಬಾಳೆ ಅಭಿನಂದನಾ ನುಡಿಗಳನ್ನಾಡುತ್ತ ಪೆÇ್ರ. ರಾಜೇಂದ್ರ ಬಿರಾದಾರ ಅವರ ಬದುಕು ಕೆಸರಿನಲ್ಲಿ ಅರಳಿದ ಕಮಲದಂತೆ. ಜೀವನದಲ್ಲಿ ಏಳು-ಬೀಳುಗಳನ್ನು ಕಂಡು, ಸಂಕಷ್ಟದ ಮಧ್ಯೆಯೂ ಅಧ್ಯಯನಗೈದು ಕರ್ನಾಟಕ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಎನ್‍ಸಿಸಿ ಅಧಿಕಾರಿಯಾಗಿ 36 ವರ್ಷ 7 ತಿಂಗಳು ಸೇವೆ ಸಲ್ಲಿಸಿದ್ದಾರೆ. ಬೀದರ ತಾಲೂಕಿನ ಸಾಂಗ್ವಿ ಗ್ರಾಮದಲ್ಲಿ ಸುಸಂಸ್ಕøತ ಕುಟುಂಬದಲ್ಲಿ ಜನಿಸಿದ ಇವರು ಗಂಭೀರ ನಡತೆ, ಕರ್ತವ್ಯಪ್ರಜ್ಞೆ, ಬೋಧನೆಯಲ್ಲಿ ನೈಪುಣ್ಯತೆ, ಸಮಯಪ್ರಜ್ಞೆ, ಸರಳ ಸಜ್ಜನಿಕೆ, ಸಾಮಾಜಿಕ ಕಳಕಳಿ ಇವರ ವಿಶೇಷತೆಯಾಗಿದೆ. ‘ಉತ್ತಮ ಪ್ರಾಧ್ಯಾಪಕ ನೂರು ಪೂಜಾರಿಗಳಿಗೆ ಸಮ’ ಎನ್ನುವಂತೆ ಬೋಧನೆಯಲ್ಲಿ ವಿದ್ಯಾರ್ಥಿಗಳ ಮನಗೆದ್ದು ಅವರ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ತಿಳಿಸಿದರು. ನಿವೃತ್ತಿ ಹೊಂದಿದ್ದ ಕರ್ನಾಟಕ ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಪ್ರಾಧ್ಯಾಪಕರಾದ ಪೆÇ್ರ. ರಾಜೇಂದ್ರ ಬಿರಾದಾರ ಮಾತನಾಡಿ ನನ್ನ ಬೆಳವಣಿಗೆಗೆ ಕಾರಣವಾದ ಕರಾಶಿ ಸಂಸ್ಥೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಪಾಲಕರಿಗೆ, ಮಿತ್ರರಿಗೆ, ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ವೇದಿಕೆ ಮೇಲೆ ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಉಪಸ್ಥಿತರಿದ್ದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ ಹಾಗೂ ಡಾ. ಪ್ರೇಕ್ಷಾ ಬಿರಾದಾರ ಮಾತನಾಡಿದರು. ಕು. ದಾನೇಶ್ವರಿ ಪ್ರಾರ್ಥಿಸಿದರು. ಪೆÇ್ರ. ಎಸ್.ವಿ.ಕಲ್ಮಠ ಸ್ವಾಗತಿಸಿದರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ವೈಜಿನಾಥ ಪಾಟೀಲ ವಂದಿಸಿದರು. ಕೊನೆಯಲ್ಲಿ ಪೆÇ್ರ. ರಾಜೇಂದ್ರ ಬಿರಾದಾರ ಅವರಿಗೆ ವಯೋನಿವೃತ್ತಿ ಪ್ರಯುಕ್ತ ದಂಪತಿಗಳ ಸಮೇತವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಪ್ರಮುಖರಾದ ರವಿ ಹಾಲಳ್ಳಿ, ವಿಜಯಕುಮಾರ ಗಂಗು, ಡಾ. ಮಲ್ಲಿಕಾರ್ಜುನ ಹಂಗರಗಿ, ಪೆÇ್ರ.ಎಂ.ಎಸ್.ಚೆಲ್ವಾ, ಪೆÇ್ರ.ಬಿ.ಎಸ್.ಬಿರಾದಾರ, ಡಾ. ಸುರೇಶ ಮಾಶೆಟ್ಟಿ, ಶ್ರೀಮತಿ ಶೋಭಾ ಬಿರಾದಾರ, ಸೃಷ್ಟಿ ಶಿವಶಂಕರ ಚಿಲ್ಲಾಬಟ್ಟೆ, ಸಿದ್ಧಾಂತ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.