ಶಿಕ್ಷಣ ಕ್ಷೇತ್ರಕ್ಕೆ ಡಿ.ಜಿ.ಜಗತಾಪರ ಕೊಡುಗೆ ಅನನ್ಯ
ಭಾಲ್ಕಿ:ಆ.12:ವಿಶ್ರಾಂತ ಜಂಟಿ ನಿರ್ದೇಶಕರಾದ ಡಿ.ಜಿ.ಜಗತಾಪ ಅವರು ಯಶಸ್ವಿಯಾಗಿ 75 ವರ್ಷ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸಿ,ಶಿಕ್ಷಣ ಕ್ಷೇತ್ರ ಸುಧಾರಣೆಗಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಭಿಪ್ರಾಯಪಟ್ಟರು.
ತಾಲೂಕಿನ ನಾಂದೇಡ-ಬೀದರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಳಸಂಗ ಕ್ರಾಸ್(ಅಂಬೆಸಾಂಗವಿ) ಹತ್ತಿರವಿರುವ ವ್ಹಿ.ಡಿ.ಜಗತಾಪ ಫಂಕ್ಷನ್ ಹಾಲ್‍ನಲ್ಲಿ ಭಾನುವಾರ ಹಮ್ಮಿಕೊಂಡ ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಅವರ ಅಮೃತ ಮಹೋತ್ಸವ' ಹಾಗೂಸುವರ್ಣ ದಾಂಪತ್ಯ ಮಹೋತ್ಸವ’ ಮತ್ತು `ಯಶೋಧನ ಗ್ರಂಥ ಬಿಡುಗಡೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಗತಾಪ ಅವರು ಈ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಅತ್ಯಂತ ದಕ್ಷತೆ,ಪ್ರಾಮಾಣಿಕತೆ,ನಿಸ್ವಾರ್ಥ ಭಾವನೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ಶಿಕ್ಷಣದಿಂದಲೇ ಸರ್ವರ ಸರ್ವಾಂಗೀಣ ವಿಕಾಸವಾಗುತ್ತದೆ.ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ಭರಿತ ಗುಣಮಟ್ಟದ ಶಿಕ್ಷಣ ಕೊಡಬೇಕು.ಇತೀಚೆಗೆ ಮಕ್ಕಳಲ್ಲಿ ಅಧ್ಯಯನಶೀಲತೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.ಪಟ್ಟಣದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಈಜುಕೊಳ,ಜೀಮ್ಸ್ ಪ್ರಾರಭಿಂಸುವ ಬಗ್ಗೆ ಜಗತಾಪ ಅವರು ಮಾಡಿದ ಮಾಡಿದ ಮನವಿ ಪುರಸ್ಕರಿಸಲಾಗುವುದು .ಪರಿಸರ ಪರಿಶುದ್ಧತೆಗಾಗಿ ಪ್ರತಿಯೊಬ್ಬರೂ ಸಿಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.ಭವಿಷ್ಯದ ದಿನಗಳಲ್ಲಿ ದೇವರು ಜಗತಾಪ ಅವರಿಗೆ ಇನ್ನೂ ಹೆಚ್ಚಿನ ಆಯೂರಾರೋಗ್ಯ ನೀಡಲಿ ಎಂದು ಶುಭಹಾರೈಸಿದರು.
ನಿವೃತ್ತ ಜಂಟಿ ನಿರ್ದೇಶಕ ಡಿ.ಜಿ.ಜಗತಾಪ ಮಾತನಾಡಿ, ನಾನು ಸಮಾಧಾನಕರ ಹಾಗೂ ಯಶಸ್ವಿಯಾಗಿ ಸೇವೆ ಸಲ್ಲಿಸಲು ಪ್ರೋತ್ಸಾಹ, ಸಹಕಾರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ,ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ,ದಿ.ಮಾಜಿ ಶಾಸಕ ವಿಜಯಕುಮಾರ ಖಂಡ್ರೆ,ಹಾಲಿ ಮಂತ್ರಿ ಈಶ್ವರ ಖಂಡ್ರೆ,ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರನ್ನು ಮರೆಯಲಾಗದು. ನನ್ನ ವೃತ್ತಿ ಜೀವನದಲ್ಲಿ ನನಗೆ ಸಾಥ್ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಡಿ.ಜಿ.ಜಗತಾಪ ಅವರು ವೃತ್ತಿಯಲ್ಲಿ ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಸಹನೆ, ತಾಳ್ಮೆಯಿಂದ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಮುಂದಿನ ಜೀವನ ಆಯುರಾರೋಗ್ಯದಿಂದ ಸುಂದರವಾಗಿ ಸಾಗಲಿ ಎಂದು ಶುಭ ಹಾರೈಸಿದರು. ಎಮ್.ಎಲ್.ಸಿ.ಮಾರುತಿರಾವ ಮುಳೆ ಮಾತನಾಡಿ,ಡಿ.ಜಿ.ಜಗತಾಪ ಅವರು ತಮ್ಮ ಸೇವಾವಧಿಯಲ್ಲಿ ನೋ ಕಾಂಪ್ರೋಮೈಸ್ ಆಗಿ ಕರ್ತವ್ಯನಿರ್ವಹಿಸಿ ಎಲ್ಲರ ಹೃದಯ ಗೆದ್ದಿದರು.
ದೇಹದಾನ : ಇದೇ ಸಂದರ್ಭದಲ್ಲಿ ಡಿ.ಜಿ.ಜಗತಾಪ ಅವರು ತಮ್ಮ ಮರಣದ ನಂತರ ತಮ್ಮ ದೇಹವನ್ನು ಬೀದರನ ಬ್ರೀಮ್ಸ್ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದು ಬರೆದುಕೊಟ್ಟ ಪ್ರಮಾಣಪತ್ರ ಬ್ರೀಮ್ಸ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ ವಾಚನ ಮಾಡಿದರು.
ಗೌರವ ಸನ್ಮಾನ:ಇದೇ ಸಂದರ್ಭದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮುಳೆ ಅವರಿಗೆ ಗೌರವ ಸನ್ಮಾನ ನಡೆಯಿತು.
ಡಾ.ಶಾರದಾ ಜಾಧವ ಮಾನೆ ಮತ್ತು ವಿಶ್ರಾಂತ ಪ್ರಾಂಶುಪಾಲೆ ರೇಖಾ ಮಹಾಜನ ಅವರು ಗ್ರಂಥ ಪರಿಚಯ ಮಾಡಿಕೊಟ್ಟರು.
ಜಿಪಂ ಮಾಜಿ ಅಧ್ಯಕ್ಷರಾದ ಪದ್ಮಾಕರ್ ಪಾಟೀಲ್,ಬಾಬುರಾವ ಕಾರಬಾರಿ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ್ ,ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ದಿನಕರರಾವ ಮೋರೆ, ಗ್ರಾಪಂ ಅಧ್ಯಕ್ಷೆ ಶೋಭಾಬಾಯಿ ಯಾದವರಾವ ಮಾನಕರಿ,ಬ್ರೀಮ್ಸ್ ನಿರ್ದೇಶಕ ಡಾ.ಶಿವುಕುಮಾರ ಶೆಟಕಾರ,ಡಾ.ಅನೀಲಕುಮಾರ ತಳವಾಡೆ,ಡಾ.ಮಹೇಶ ಪಾಟೀಲ್,ಮತ್ತು ಪ್ರಮುಖರಾದ ನಾಗನಾಥರಾವ ಬಗದೂರೆ,ಹೀರಾಚಂದ ವಾಘ್ಮರೆ,ಕೈಲಾಸನಾಥ ಮೆನಕೆರಿ,ನಾರಾಯಣ ಗಣೇಶ ,ಎಲ್.ಜಿ.ಗುಪ್ತಾ, ಅಂಗದರಾವ ಜಗತಾಪ ,
ಡಾ.ಶರದ ಬಿರಾದಾರ , ಹಣಮಂತರಾವ ಚವ್ಹಾಣ, ನಾಗಭೂಷಣ ಮಾಮಡಿ, ಪ್ರಕಾಶ ಮಾಶೆಟ್ಟೆ,ದಿಗಂಬರರಾವ ಮಾನಕಾರಿ, ವಕೀಲ ನಾಗನಾಥ ಸ್ವಾಮಿ, ಸಹದೇವ ಗೌಂಡಗಾವೆ, ಜಯರಾಮ ಬಿರಾದಾರ, ಗೀತಾ ಮಾಣೀಕರಾವ, ಅಂಬ್ರಿಷ ಖಂಡ್ರೆ, ಸವಿತಾ ಗಬಾಳೆ, ಮಲ್ಲಿಕಾರ್ಜುನ ಹಲಮಂಡಗೆ, ಬಾಬುರಾವ ದತ್ತಾಸಮಜೆ, ಪಂಢರಿನಾಥ ಪಾಂಚಾವರೆ, ಶಿವಾಜಿರಾವ ಸೂರ್ಯವಂಶಿ, ಗೋವಿಂದರಾವ ಮರಾಠೆ, ಗೋಪಾಳರಾವ ಮರಾಠೆ, ಜಗದೀಶರಾವ ಮರಾಠೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಠಿಕು ಠಾಕು…
“ಡಿ.ಜಿ.ಜಗತಾಪ ಆರಂಭದಿಂದ ಶಿಸ್ತಿನ ಸಿಪಾಯಿಯಾಗಿ,ಖಡಕ ಅಧಿಕಾರಿಯಾಗಿ,ಜನಸ್ನೇಹಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ.ಇಳಿ ವಯಸ್ಸಿನಲ್ಲಿಯೂ ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ವಿನೂತನ ಮಾದರಿಯ ಸಲಹೆ ಸೂಚನೆ ಕೊಡುತ್ತಿರುವುದು ಅಭಿಮಾನದ ಸಂಗತಿ. ಯುವಶಕ್ತಿ ದುಶ್ಚಟ,ದುರ್ಗುಣಗಳಿಂದ ದೂರ ಉಳಿದು ಚಾರಿತ್ರ್ಯವಂತ ಬದುಕು ರೂಪಿಸಿಕೊಳ್ಳಬೇಕು.”-ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವರು, ಬೆಂಗಳೂರು.