ವಿದ್ಯಾರ್ಥಿಗಳಿಗೆ ಶಾಲಾ ಸ್ಪರ್ಧಾಕೂಟ
ಅಫಜಲಪುರ:ಆ.12: ಪಟ್ಟಣದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತಿ ಹಾಗೂ 7ನೇ ಭಾರತೀಯ ಸಂಸ್ಕøತಿ ಉತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಪರ್ಧಾ ಕೂಟ ನಡೆಸಲಾಯಿತು.
ಸ್ಪರ್ಧಾ ಸಂಚಾರಕರಾದ ಅರ್ಚನಾ ಪುರೋಹಿತರವರು ಇದು ರಾಷ್ಟ್ರಮಟ್ಟದ ಕಾರ್ಯಕ್ರಮದ ಅಡಿಗಲ್ಲು ಎಂದು ತಿಳಿಸಿದರು.
ಭಾಗಿಯಾದ19 ಶಾಲೆಗಳಲ್ಲಿ 16 ಸ್ಪರ್ಧೆಗಳು ನಡೆದವು. ಮುಖಂಡ ಮಳೇಂದ್ರ ಡಾಂಗೆ ಅಧ್ಯಕ್ಷತೆ ವಹಿಸಿಕೊಂಡರು. ಪ್ರತಿ ಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ನಿರೂಪಣೆಯನ್ನು ಅಂಬೇಡ್ಕರ್ ನಡೆಸಿಕೊಟ್ಟರು. ಕಾರ್ಯಕ್ರಮದ ವಿವರ ಮನೋಜ್ ವಾಲಿ ತಿಳಿಸಿದರು. ಈ ವೇಳೆ ತಾಲೂಕು ಸಂಚಾಲಕ ರಾಮಚಂದ್ರ ಸುತಾರ, ಪ್ರಭಾವತಿ ಮೇತ್ರಿ, ಪ್ರತಿಭಾ ಮಹೀಂದ್ರಕರ್, ಶಿವಾನಂದ್ ಕುಂಬಾರ ಸೇರಿದಂತೆ ಅನೇಕರಿದ್ದರು. ಭಾಗವಹಿಸಿದ್ದರು.