ತುಂಗಭದ್ರಾ ಜಲಾಶಯದ ನೀರಿನ ಕೊರತೆರೈತರ ಹಿತ ಕಾಪಾಡುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳ ಮೇಲಿದೆ: ಭಾರಧ್ವಾಜ್
ಗಂಗಾವತಿ: ತುಂಗಭದ್ರ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿರುವ ಈ ಸುಸಂದರ್ಭದಲ್ಲಿ ನಿನ್ನೆ ಪಸ್ಟ್-10  ಜಲಾಶಯದ ಹೆಚ್ಚುವರಿ ನೀರನ್ನು ಹೊರ ಬಿಡುವ 33 ವರ್ಟಿಕಲ್ ಕ್ರಸ್ಟ್ ಗೇಟ್‍ಗಳಲ್ಲಿ 19ನೇ ಗೇಟ್ ನ ಚೈನ್ ಕಡಿತಗೊಂಡು  ಇದರಿಂದ ಈ ಗೇಟ್ ವೇ ನಲ್ಲಿ ಸುಮಾರು 30.000 ಕ್ಕೂ ಅಧಿಕ ಪ್ರಮಾಣದ ನೀರು ಜಲಾಶಯದಿಂದ ನದಿಗೆ ಹರಿದಿವೆ. ಪ್ರಸ್ತುತ ಜಲಾಶಯದ ಪರಿಸ್ಥಿತಿ ಗಂಭೀರವಾಗಿದ್ದು, ಅಚ್ಚುಕಟ್ಟು ರೈತರು ಮುಂಗಾರಿನ ಬೆಳೆ ಹೇಗೆ ಎಂಬ ಆತಂಕದಲ್ಲಿ ಇದ್ದಾರೆ ಎಂದು ತುಂಗಭದ್ರಾ ಉಳಿಸಿ ಆಂದೋಲನ ¸ ಸಮಿತಿಯ ಗೌರವಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಆಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಹಾಳಾಗಿರುವುದರಿಂದ ಈ ಕ್ರಸ್ಟ್ ಗೇಟ್‍ನ 20 ಅಡಿಯಷ್ಟು ಎತ್ತರದ ಗೇಟ್ ರಿಪೇರಿ ಮಾಡಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ ಎಂಬುದು ನೀರಾವರಿ ಇ ಲಾಖೆಯ ಮೂಲಗಳಿಂದ ತಿಳಿದು ಬಂದಿದೆ.  ಹೈದರಾಬಾದಿನಿಂದ ಗೇಟಿನ ನಿರ್ಮಾಣ ತಜ್ಞರು ಬರುತ್ತಿದ್ದಾರೆ. ಗೇಟ್‍ನ ನಿರ್ಮಾಣ 5-7 ದಿನ ಹಿಡಿಯಬಹುದು. ಜಲಾಶಯದ 20 ಅಡಿಗಳಷ್ಟು ನೀರು ಸುಮಾರು 60 ಟಿಎಂಸಿ ಯಷ್ಟಾಗುತ್ತದೆ. ಇದು ಜಲಾಶಯದ ಅರ್ಧ ಭಾಗ ಖಾಲಿಯಾದಂತೆ. ಆಗ ಜಲಾಶಯದಲ್ಲಿ ಉಳಿಯುವ ನೀರು ಕೇವಲ 40-45 ಟಿಎಂಸಿ ಮಾತ್ರ. ಇದು ಮುಂಗಾರಿನ ಬೆಳೆಗೆ ಸಾಲುವುದಿಲ್ಲ. ಆದರೆ ಜಲಾಶಯಕ್ಕೆ ನೀರು ಬರುವ ಆಶಾಭಾವನೆ ಇದೆ. ಹೆಚ್ಚು-ಕಮ್ಮಿ ಮುಂಗಾರಿನ ಬೆಳೆಗೆ ನೀರಿನ ಕೊರತೆಯಾಗಲಾರದು. ತುಂಗಭದ್ರ ಜಲಾಶಯದಿಂದ ಪ್ರಸ್ತುತ ಒಂದು ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಹರಿಬಿಡತ್ತಿದ್ದ, ಇನ್ನು ಲಕ್ಷ ಕ್ಯೂಸೆಕ್ಸ್ ನೀರು ಹರಿಯುವ ಸಾಧ್ಯತೆ ಇದೆ. ನದಿಪಾತ್ರದ ಜನ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಯಾವುದೇ ರೀತಿಯ ನೀರಿನ ಕೊರತೆ ಆಗದಂತೆ ರೈತರ ಹಿತ ಕಾಪಾಡುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳಿಂದ ಸ್ಪೀಡ್  ಆಗಿ ಕೆಲಸ ಪೂರ್ಣಗೊಳಿಸಲು ತುಂಗಭದ್ರ ಉಳಿಸಿ ಆಂದೋಲನ ಸಮಿತಿಯು ಜಲ ಸಂಪನ್ಮೂಳ ಇಲಾಖೆಯ ಮುಖ್ಯ ಅಭಿಯಂತರರಿಗೆ ಒತ್ತಾಯಿಸಿದೆ.