ಎಸ್ ಎಂ ಎಸ್ ಎಸ್ ಎಸ್ ಸಂಸ್ಥೆಯ ಸಂಸ್ಥಾಪನಾ ದಿನದ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಆ.೧೨ : ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯ ಸಂಸ್ಥಾಪನ ದಿನದ ಅಂಗವಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ, ಕಂಕನಾಡಿ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಆವರಣದಲ್ಲಿ ನಡೆಯಿತು.ಈ ಆರೋಗ್ಯ ತಪಾಸಣಾ ಶಿಬಿರವನ್ನು ಬಸವ ಕೇಂದ್ರದ  ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿದರು. “ಭಾವೈಕ್ಯತೆಯಿಂದ ಕೂಡಿದ ಆರೋಗ್ಯ ತಪಾಸಣಾ ಶಿಬಿರವನ್ನು ಸರ್ವಧರ್ಮಗಳ ಪ್ರಾರ್ಥನೆಯ ಮೂಲಕ ನಡೆಸಿರುವುದು ಸಂತೋಷಕರವಾಗಿದೆ. ನಾವೆಲ್ಲರೂ ಒಟ್ಟಾಗಿ ಸಮಾಜದಲ್ಲಿ ಒಂದೇ ಎಂಬ ಭಾವನೆಯಿಂದ ಸಾಗೋಣ. ಆರೋಗ್ಯ ಯಾವ ಜಾತಿ ಧರ್ಮದ ಸ್ವತ್ತಲ್ಲ ಎಲ್ಲರೂ ಆರೋಗ್ಯದ ಕಡೆ ಜಾಗೃತರಾಗಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ವ್ಯಕ್ತಿಯು ಸದೃಢನಾಗಿರುತ್ತಾನೆ” ಎಂದು ಕರೆ ನೀಡಿದರು. “ಎಸ್ಎಂಎಸ್ಎಸ್ಎಸ್ ಸಂಸ್ಥೆಯು ಕಳೆದ 35 ವರ್ಷಗಳಿಂದ ಬಡವರ್ಗದ ಜನರ ಶ್ರೇಯೋಭಿವೃದ್ದಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ ಹಾಗೂ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಶಿಕ್ಷಣವನ್ನೂ ಸಹ ಸಂಸ್ಥೆಯು ನೀಡುತ್ತಿದೆ” ಎಂದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಮೊಗ್ಗದ ಅಪರ ಜಿಲ್ಲಾ ರಕ್ಷಣಾಧಿಕಾರಿಗಳಾದ  ಅನಿಲ್ ಕುಮಾರ್ ಬೊಮ್ಮರೆಡ್ಡಿಯವರು ಮಾತನಾಡಿ “ಆರೋಗ್ಯವು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು ಆಸ್ತಿ, ಮನೆ, ಬಂಗಾರ ಇದ್ದರೂ ಆರೋಗ್ಯ ಉತ್ತಮವಾಗಿರದಿದ್ದರೆ ಅದು ಶೂನ್ಯವಾಗುತ್ತದೆ” ಎಂದರು. ನಂತರ “ಸಂಸ್ಥೆಯು ಸಮಾಜದಲ್ಲಿ ಶಾಂತಿ, ಪ್ರೀತಿ, ನ್ಯಾಯದ ಧ್ಯೇಯದೊಂದಿಗೆ ಕಳೆದ 35 ವರ್ಷಗಳಿಂದ ಸೇವಾ ಕಾರ್ಯಗಳನ್ನು ನೀಡುತ್ತಾ ಬರುತ್ತಿರುವುದು ಅವಿಸ್ಮರಣೀಯವಾಗಿದೆ. ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಶೋಷಿತ ಜನರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ” ಎಂದು ಶುಭ ಹಾರೈಸಿದರು.ಈ ಶಿಬಿರದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆದಂ ರಜಾ  ನಈಮಿರವರು ಮಾತನಾಡಿ “ಸರ್ವಧರ್ಮೀಯರಿಗೆ ಸಂಸ್ಥೆಯ ಸಂಸ್ಥಾಪನ ದಿನದ ಅಂಗವಾಗಿ ಮೆಗಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಅರ್ಥಗರ್ಭಿತವಾಗಿದೆ.