ಸ್ವಯಂ ಉದ್ಯೋಗದಿಂದ ಮಹಿಳೆಯರಿಗೆ ಅನುಕೂಲ
ಸಂಜೆವಾಣಿ ವಾರ್ತೆ
ಹಿರಿಯೂರು: ಆ. 12 – ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಜಿಲ್ಲಾ ಖನಿಜ ನಿಗಮ ಪ್ರಾತಿಷ್ಟಾನ   ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ  ಸಹಯೋಗದೊಂದಿಗೆ  ಅನುಷ್ಠಾನ ಸಂಸ್ಥೆ ಗ್ರಾಮ ಸಂಸ್ಥೆ   ಸಹಕಾರದಲ್ಲಿನಿರುದ್ಯೋಗಿ ಯುವತಿರಿಗೆ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್  ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಈ ಕಾರ್ಯಕ್ರಮ ಉತ್ತಮವಾಗಿದ್ದು  ಈ ತರಬೇತಿ ಕಾರ್ಯಕ್ರಮ ವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು ಹಾಗೂ ಮುಂದಿನ ದಿನಗಳಲ್ಲಿ ತಾಲ್ಲೋಕಿನಲ್ಲಿ ಈ ಕಾರ್ಯಕ್ರಮವನ್ನು ಇನ್ನು ಹೆಚ್ಚು ಜನರಿಗೆ ಕೊಡಿಸಲಾಗುವುದು ಮತ್ತು  ತಾಲ್ಲೋಕಿನಲ್ಲಿ ಗಾರ್ಮೆಂಟ್ ಕಾರ್ಖಾನೆಗಳನ್ನು ಪ್ರಾರಂಭಿಸಲಾಗುವುದು ಎಂದರು ಕಾರ್ಯಕ್ರದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಕೊಲ್ಲಮ್ಮ   ವಹಿಸಿದ್ದರು. ವೈ ನಾಗರಾಜ್ ಸ್ವಾಗತಿಸಿದರು .ಪ್ರಾಸ್ತಾವಿಕವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಮೇಲ್ವಿಚಾರಕಿ ತಾಯಿಮುದ್ದಮ್ಮ ಮಾತನಾಡಿದರು .ಕಾರ್ಯಕ್ರಮದಲ್ಲಿ  ಮುಖಂಡರಾದ ಖಾದಿ ರಮೇಶ್ ,ಈರಲಿಂಗೇಗೌಡ, ಸುರೇಶ್ ಬಾಬು,  ಶ್ರೀನಿವಾಸ ಎಂ ಎ ,ಡಿ ಎಂ ಶ್ರೀಧರ,ಅರುಣ್ ಕುಮಾರ್,ಹನುಮಂತಯ್ಯ ಎಂ  ಕಲಾವತಿ, ತಿಪ್ಪೇಸ್ವಾಮಿ, ಮಂಜುಳಾ, ವೀರೇಶ್, ಪರಮೇಶ್ವರಪ್ಪ, ನಾಗರಾಜ್ ,ಕುಮಾರ್ , ಸೆಂಥಿಲ್ ಕುಮಾರ್ ಹೇಮಂತ್ ಗೌಡ ,ಪಿ ಎಚ್ ಧನಂಜಯ ಹಾಗೂ ಶಿಬಿರಾರ್ಥಿಗಳು ಇದ್ದರು.ಕಾರ್ಯಕ್ರಮವನ್ನು ಗ್ರಾಮ ಸಂಸ್ಥೆಯ ಬಸವರಾಜ್ ನಿರೂಪಿಸಿ ದೇವರಾಜ್  ವಂದಿಸಿದರು .