ವರ್ಗಾವಣೆಗೊಂಡ  ಪಿಎಸ್ಐ-  ಸಿಬ್ಬಂದಿಗಳಿಗೆ ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಜಗಳೂರು.ಆ.೧೨ :- ಪಟ್ಟಣದ ಪೋಲೀಸ್ ಠಾಣೆ ಆವರ ಣದಲ್ಲಿ ಪಿಎಸ್ ಐ ಎಸ್.ಡಿ.ಸಾಗರ್ ಅವರ ವರ್ಗಾವಣೆ ಗೊಂಡ ಹಿನ್ನೆಲೆ‌ ಬೀಳ್ಕೊಡುಗೆ ನೀಡಲಾಯಿತು.ಪೋಲೀಸ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ಮಾತ ನಾಡಿ,ಸಾರ್ವಜನಿಕರ ಹಿತದೃಷ್ಠಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಅನಿವಾರ್ಯತೆಯಿದೆ.ಅಪರಾಧಗಳ ನ್ನು ಕಡಿವಾಣಹಾಕುವ ವೃತ್ತಿ ನಮ್ಮದು.ಶಾಂತಿ,ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಸಿಬ್ಬಂದಿಗಳ,ಪೋಲೀಸ್ ಸಬ್ ಇನ್ಸ್ಪೆಕ್ಟರ್ ಅವರ ಸಹಕಾರದಿಂದ ಮೂಲ ಸೌಕರ್ಯಕ್ಕೆ ಒತ್ತುನೀಡಿರುವೆ.226 ಪ್ರಕರಣಗಳಲ್ಲಿ ಇತ್ಯರ್ಥಪಡಿಸಿ ಕೇವಲ 26 ಪ್ರಕರಣಗಳು ತನಿಖೆ ಹಂತ ದಲ್ಲಿವೆ.ಇದಕ್ಕೆ ಪಿ.ಎಸ್ಐ. ಡಿ.ಸಾಗರ್ ಅವರ ಕರ್ತವ್ಯ ಪಾಲನೆ ಕೈಗನ್ನಡಿಯಾಗಿದೆ ಎಂದು ಪ್ರಶಂಸಿದರು.ಪೋಲೀಸ್ ಇಲಾಖೆಯಲ್ಲಿ ಇತರೆ ಇಲಾಖೆಗಳಿಗಿಂತ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ.ವೇತನಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸೋಣ ಎಂದರು.ಪಿಎಸ್ ಐ ಎಸ್.ಡಿ.ಸಾಗರ್ ಸನ್ಮಾನ ಸ್ವೀಕರಿಸಿ ಮಾತ ನಾಡಿ,ನನ್ನ ಕರ್ತವ್ಯ ಅವಧಿಯಲ್ಲಿ ಸಿಬ್ಬಂದಿಗಳು ಸಹಕಾರ ಅಪಾರವಾಗಿತ್ತು.ತಾಲೂಕಿನಲ್ಲಿ ಮುಗ್ಧತೆಯ ಜನರಿದ್ದು. ಯಾವತ್ತೂ ನನ್ನನ್ನು ಕಡೆಗಣನೆಮಾಡದೆ ಸದಾ ಸ್ಪಂದಿಸಿ ದ್ದಾರೆ ಎಂದು ತಿಳಿಸಿದರು.ಇದೇ ವೇಳೆ 11 ಜನ ಪೋಲೀಸ್ ಸಿಬ್ಬಂದಿಗಳು ವರ್ಗಾ ವಣೆಗೊಂಡಿರುವವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.ಈ ಸಂದರ್ಭದಲ್ಲಿ ಪಿಎಸ್ ಐಗಳಾದ ಆಶಾ,ಮಂಜು ನಾಥ್ ಸ್ವಾಮಿ,ಸಿಬ್ಬಂದಿಗಳಾದ ಕರಿಬಸಪ್ಪ.ಪಕ್ಷಣ್ಣ, ಮಾರುತಿ, ಬಸವರಾಜ್, ಆನಂದಪ್ಪ,ರಮೇಶ್,ನಾಗರಾಜ, ಶಿವಕುಮಾರ್, ಅಜ್ಜಯ್ಯ, ಮಧುರಾ, ಕುಮಾರಸ್ವಾಮಿ. ಬಸಂತಪ್ಪ.ಮುಖಂಡರಾದ ಬಿಸ್ತುವಳ್ಳಿ ಬಾಬು,ಓಬಣ್ಣ, ವಕೀಲರಾದ ಪಟೇಲ್,ಉಮಾಪತಿ ನಾಯ್ಕ, ಪತ್ರಕರ್ತರು ಸೇರಿದಂತೆ ಇದ್ದರು.