ಆಯುರ್ವೇದ ಚಿಕಿತ್ಸಾ ಶಿಬಿರ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ,12-  ಶ್ರೀ ಗುರು ಪುಷ್ಕರ ಸೇವಾ  ಸಮಿತಿಯಿಂದ  ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಸರಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ತಾರಾನಾಥ ಬಳ್ಳಾರಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಉಚಿತ ಮೊಣಕಾಲು ಕೀಲು ಮತ್ತು ಇತರ ದೇಹ ರೋಗಗಳನ್ನು ಪರೀಕ್ಷಿಸಲಾಯಿತು. ಇದರಲ್ಲಿ 350 ಕ್ಕೂ ಹೆಚ್ಚು ರೋಗಿಗಳು ತಮ್ಮನ್ನು ಪರೀಕ್ಷಿಸಿಕೊಂಡರು. ಈ ಸಂದರ್ಭದಲ್ಲಿ ಡಾ.ರಾಜಶೇಖರ ಗಿಣಗೇರಿ ಪ್ರಾಂಶುಪಾಲ ತಾರಾನಾಥ ಆಯುವೇದ ಕಾಲೇಜು ಡಾ.ಕೊಟ್ರೇಜ್ ಆರ್.ಎಂ.ಓ ಡಾ.ತಮೀಮ್ ಆಂಚರಿ ಡಾ.ರಾಮಲಿಂಗ ಹೂಗಾರ ಡಾ.ತಾಟ್ಲೆ ಡಾ.ಲಲಿತಾ ಡಾ.ಸುಷ್ಮಿತಾ ಎಸ್.ಎಸ್. ಕೇವಲ್ಚಂದ್ಜಿ ವಿನಾಕಿಯಾ ಗುರು ಪುಷ್ಕರ ಸೇವಾ ಸಮಿತಿ ಅಧ್ಯಕ್ಷ .ಅಶೋಕ್ಜಿ ಭಂಡಾರಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ದೀಪೇಶ್ ಪರಾಖ್ ಈ ಮಾಹಿತಿ ನೀಡಿದ್ದಾರೆ.