ಮುಕುಟ ಸಪ್ತಮಿ ಪೂಜಾ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು,ಆ.12: ನಾನು ಶಾಸಕನಾಗಿ ಆಯ್ಕೆಯಾಗಿ ಮೊಟ್ಟಮೊದಲನೇಯ ನನ್ನ ಕ್ಷೇತ್ರದ ವ್ಯಾಪ್ತಿಯ ಕಸಮಳಗಿಯ ವರಸಿದ್ದಿ 1008 ಶ್ರೀ ಪಾಶ್ರ್ವನಾಥ ದೇವಾಲಯದ ಆವರಣದಲ್ಲಿಯ ಮುನಿನಿವಾಸ ಮತ್ತು ಕಾಂಕ್ರೀಟ್ ರಸ್ತೆ, ಉದ್ಘಾಟಿಸಿ, ಧ್ವಜವಂದನೆ ನೇರವೇರಿಸಲು ನನಗೆ ಭಾಗ್ಯ ದೊರೆತಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಕಸಮಳಗಿ (ಕೇಸರಮಳಗಿ) ಗ್ರಾಮದ ಹೊರವಲಯದ ಶ್ರೀ 1008 ಪಾಶ್ರ್ವನಾಥ ಜಿನಮಂದಿರದಲ್ಲಿ ಮುಕುಟ ಸಪ್ತಮಿ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದವರು. ನೂತನವಾಗಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪಕ್ಕೆ ನನಗೆ ಸರ್ಕಾರ ನೀಡಿರುವ ಅನುದಾನದಡಿಯಲ್ಲಿ ಹಣ ಬಿಡುಗಡೆಗೊಳಿಸಿ ಈ ಗ್ರಾಮಕ್ಕೆ ಹಾಗೂ ಕ್ಷೇತ್ರಕ್ಕೆ ನಿಮ್ಮ ಜೊತೆಯಲ್ಲಿ ಸದಾ ಕೈಜೊಡಿಸಿ ಈ ಜಿನಮಂದಿರ ಅಭಿವೃದ್ಧಿಗೆ ಸದಾಬದ್ಧನಿದ್ದೇನೆ ಎಂದರು.
ಸಾನಿದ್ಯವಹಿಸಿ ಆರ್ಶೀವಚನ ನೀಡಿ ಗಣನೀಯ ಆರ್ಯಿಕಾರತ್ನ 105 ಶ್ರೀ ಜಿನವಾಣಿ ಮಾತಾಜಿ ಮಾತನಾಡಿದರು.
ಧರ್ಮಾನುರಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಮೋದ ಕೊಚೇರಿ, ಅಭಯ ಅವಲಕ್ಕಿ. ಹಾಲಿ ಶಾಸಕ ಅಭಯ ಪಾಟೀಲ ಮಾಜಿ ಶಾಸಕರುಗಳಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ಉದ್ಯಮಿ ದಿ. ರಾಜುದೊಡ್ಡಣವರ ಸೇರಿದಂತೆ ಜೈನ ಹಿರಿಯ ಮುಖಂಡರು, ಶ್ರಾವಕ-ಶ್ರಾವಕೀಯರು, ಗ್ರಾಮಸ್ಥರು, ಶ್ರಮವಹಿಸಿದ್ದರಿಂದಲೇ ಈ ಮಂದಿರವಾಗಲು ಸಾಧ್ಯವಾಯಿತೆಂದರು.
ಜಿನವಾಣಿ ಮಾತಾಜಿ ಮತ್ತು ಪದ್ಮವಿಭೂಷಣ ಡಾ.ಶ್ರೀ ವೀರೇಂದ್ರ ಹೆಗಡೆ ಹಾಗೂ ಶ್ರವಣಬೆಳಗೋಳ ಕರ್ಮಯೋಗಿ ಸ್ವಸ್ಥಿಶ್ರೀ ಚಾರುಕೀರ್ತಿ ಭಟ್ಟಾರಕರ ಮತ್ತು ಶ್ರೀ ವರಸಿದ್ಧಿ ಪಾಶ್ರ್ವನಾಥ ದಿಗಂಬರ ಟ್ರಸ್ಟ್ ಕಸಮಳಗಿ ಹಾಗೂ ಜೈನ ಯುವ ಸಂಘಟನೆಯ ಕಾರ್ಯಕರ್ತರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಸವಾಲ್ ಕಾರ್ಯಕ್ರಮಗಳು ಸರ್ವದೋಷ ನಿವಾರಣಾ ವಿಧಾನ ಮತ್ತು ನಿರ್ವಾಣ ಲಡ್ಡು ಸಮರ್ಪಣೆ ಏರ್ಪಪಟ್ಟಿತು. ಪದ್ಮಾವತಿ ದೇವಿಗೆ ಉಡಿ ತುಂಬಿ , ಶ್ರೀಕ್ಷೇತ್ರ ಪಾಲ ಬ್ರಹ್ಮದೇವರಿಗೆ ಉಡುಗೋರೆ ಅರ್ಪಿಸಲಾಯಿತು.
ಬೆಳಗಾವಿಯ ವಿಧಾನಾಚಾರ್ಯ ಧರ್ಮರಾಜ ಉಪಾಧ್ಯ, ತಿಗಡೋಳ್ಳಿಯ ಚಂದನ ಉಪಾಧ್ಯೆ ಇವರುಗಳ ತಂಡದಿಂದ ವಿಧಾನ ಕಾರ್ಯಕ್ರಮದ ಪೂಜೆ ನೇರವೇರಿತು. ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ರಾಜು ಜಕ್ಕಣ್ಣವರ, ಪ್ರಮೋದ ಪಾಟೀಲ, ಅಭಯ ಅವಲಕ್ಕಿ, ಭೀಮಪ್ಪ ಬೋಕಡೆಕರ, ಉದಯ ಬಡಸ್ಕರ, ಬಾಬು ಮಡಾಕರ, ಡಿ.ಡಿ.ಪಾಟೀಲ, ಈರಪ್ಪ ಹುಬ್ಬಳ್ಳಿ, ಮಹಾವೀರ ಗೌಡ್ರ, ಜೈನ ಯುವ ಸಂಘಟನೆ, ರಾಜ್ಯ ಹಾಗೂ ಹೊರ ರಾಜ್ಯ, ಜಿಲ್ಲೆ-ತಾಲೂಕು, ಗ್ರಾಮಸ್ಥರು, ವಿವಿಧ ಗ್ರಾಮಗಳ ಎಲ್ಲ ಶ್ರಾವಕ-ಶ್ರಾವಕೀಯರು ಇದ್ದರು. ಸ್ವಾಗತ, ನಿರೂಪಣೆ, ವಂದನಾರ್ಪನೆ ಗೀರಿಶ ಪೂಜಾರ ಮಾಡಿದರು.