ಕಳಪೆ ಆಹಾರ ಪೂರೈಕೆ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ
ಕೋಲಾರ,ಆ.೧೧- ಜಿಲ್ಲಾದ್ಯಂತ ಹದಗೆಟ್ಟಿರುವ ಹಾಸ್ಟೆಲ್ ವ್ಯವಸ್ಥೆಯನ್ನು ಸರಿಪಡಿಸಲು ವಿಶೇಷ ತಂಡ ರಚನೆ ಮಾಡಿ ಮಕ್ಕಳ ಊಟದ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವ ಅಧಿಕಾರಿಗಳು ಹಾಗೂ ಕಳಪೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ನಗರದ ಹೊರ ವಲಯದ ಸಮಾಜ ಕಲ್ಯಾಣ ಇಲಾಖೆ ಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ರವರು ಜಿಲ್ಲೆಯಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸ ಮಾಡುವ ಹಾಸ್ಟೆಲ್‌ಗಳಲ್ಲಿ ಒಂದಲ್ಲ ಒಂದು ರೀತಿ ಅವ್ಯವಸ್ಥೆ ನಡೆಯುತ್ತಿದೆ. ಇತ್ತೀಚೆಗೆ ಮಲದಗುಂಡಿಯಲ್ಲಿ ಮಕ್ಕಳಿಂದ ಸ್ವಚ್ಚತೆ ಹಾಗೂ ಹೆಣ್ಣು ಮಕ್ಕಳ ಆಶ್ಲೀಲ ಚಿತ್ರೀಕರಣ ಜೀವಂತವಾಗಿರುವಾಗ ಮತ್ತೆ ಹಾಸ್ಟೆಲ್‌ಗಳಲ್ಲಿನ ಸಿಬ್ಬಂದಿಯ ಬೇಜವಬ್ದಾರಿ ಮನಸ್ಥಾಪಗಳು ಒಳ ಜಗಳಗಳಿಂದ ಬಡ ಮಕ್ಕಳ ಊಟಕ್ಕೆ ವಿಷ ಹಾಕುವ ಪ್ರಕರಣ ಮಾನವೀಯತೆಯುಳ್ಳ ಸಮಾಜ ತಲೆ ತಗ್ಗಿಸುವಂತ ವಿಚಾರವಾಗಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಮಕ್ಕಳ ಹಾಜರಾತಿಯಲ್ಲಿ ಹಾಗೂ ಆಹಾರ ಸರಬರಾಜು ಮಾಡುವ ಗುತ್ತಿಗೆದಾರರ ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡು ದುಬಾರಿ ಬೆಲೆ ಬಿಲ್‌ಗಳನ್ನು ನೀಡಿ ಅಧಿಕಾರಿಗಳ ಜೊತೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡುವ ದಂದೆ ಒಂದು ಕಡೆಯಾದರೆ ಹಾಸ್ಟೆಲ್‌ನಲ್ಲಿ ಇರುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಅವ್ಯವಸ್ಥೆಯ ಹಗರಣಗಳಾಗಿ ಮಾರ್ಪಟ್ಟಿದ್ದರೂ ಕನಿಷ್ಠ ಸೌಜನ್ಯಕ್ಕಾದರೂ ಹಾಸ್ಟೆಲ್ ಬೇಟಿ ನೀಡದೆ ಸಭೆಗಳಲ್ಲಿ ಅಬ್ಬರಿಸಿ ಬಿಬ್ಬರಿಸುವ ಜನಪ್ರತಿನಿದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ ಜಲ್ವಂತ ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ನಾಪತ್ತೆ ಆಗಿರುವ ಜೊತೆಗೆ ಅಧಿಕಾರಿಗಳಿಗೆ ಭಯವಿಲ್ಲದೆ ಎಲ್ಲಾ ಕಚೇರಿಗಳು ದಲ್ಲಾಳಿಗಳ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು.
ಮಂಗಸಂದ್ರ ತಿಮ್ಮಣ್ಣ, ಯಲ್ಲಪ್ಪ, ಹರೀಶ್, ವಿಜಯ್‌ಪಾಲ್, ಪಾರುಕ್‌ಪಾಷ, ಗೀರೀಶ್, ಮುಂತಾದವರಿದ್ದರು.