ಗುರುವಿನ ಬಗ್ಗೆ ಗೌರವಇರಲಿ
ಬಾಗಲಕೋಟ,ಆ.12: ವಿದ್ಯೆ ಕಲಿಸುವ ಗುರುಗಳ ಬಗ್ಗೆ ಗೌರವ ಭಾವನೆಯನ್ನು ಹಾಗೂ ಕಲಿತಕಾಲೇಜಿನ ಬಗ್ಗೆ ಅಭಿಮಾನವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಪ್ರಾರ್ಥನಾ ಪಿಯುಕಾಲೇಜಿನಅಧ್ಯಕ್ಷ ಶ್ರೀನಿವಾಸ ಗೌಡರ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ 40ನೇ ವಾರ್ಷಿಕೋತ್ಸವ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಮತ್ತು ನಿವೃತ್ತರ ಸನ್ಮಾನಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಗುರುಗಳು ವಿದ್ಯಾರ್ಥಿಗಳ ಸರ್ವತೋಮುಖಅಭಿವೃದ್ಧಿಗೆ ಸದಾ ಶ್ರಮಿಸುತ್ತಾರೆ. ಅವರು ಸಾಧನೆ ಮಾಡಿದಾಗ ಸಂತಸಗೊಳ್ಳುತ್ತಾರೆ. ಇಂತಹ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಗೌರವ ಭಾವನೆಇರಬೇಕು. ಮತ್ತೊಬ್ಬರ ಬಗ್ಗೆ ವಿನಾಕಾರಣವಾಗಿ ಆಡಿಕೊಳ್ಳದೆ, ವಿದ್ಯಾರ್ಥಿಗಳು ಒಳ್ಳೆಯ ವಿಚಾರ,ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕೆಉತ್ತಮಕೊಡುಗೆಯನ್ನು ನೀಡುವುದರ ಬಗ್ಗೆ ಚಿಂತನೆ ಮಾಡಬೇಕುಎಂದರು.
ನಿವೃತ್ತರ ಬಗ್ಗೆ ಮಾತನಾಡುತ್ತ, ನಿವೃತ್ತಿ ನಂತರಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ.ಸಂಸ್ಥೆಯಅಭಿವೃದ್ಧಿಯಲ್ಲಿಕೈಜೋಡಿಸಲಿ ಎಂದರು.
ಸ್ವಾಗತಿಸಿ ಮಾತನಾಡಿದ ಪ್ರಾಚಾರ್ಯ ಶ್ರೀನಿವಾಸ ನರಗುಂದ ವಿದ್ಯಾರ್ಥಿಗಳು ಈ ಪದವಿ ಶಿಕ್ಷಣದ ನಂತರಜೀವನ ಪರೀಕ್ಷೆಯನ್ನು ಸಮರ್ಥವಾಗಿಎದುರಿಸಬೇಕಿದೆ.ಅದಕ್ಕೆ ಶ್ರದ್ಧೆ,ಪಾಮಾಣಿಕ ಪ್ರಯತ್ನ ಬೇಕು. ಅದುಉತ್ತಮಜೀವನವನ್ನು ರೂಪಿಸಿಕೊಳ್ಳಲು ಸಹಕಾರಿ. ನಿವೃತ್ತರನ್ನು ಅಭಿನಂದಿಸಿ, ವೃತ್ತಿಯಿಂದ ನಿವೃತ್ತಿಯಾಗಿ ಒಳ್ಳೆಯ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಜೀವನದಲ್ಲಿ ಸಂತೃಪ್ತಿ ಸಾಧ್ಯಎಂದರು.
ಸೇವಾ ನಿವೃತ್ತಿ ಹೊಂದಿದಡಾ.ವಿ.ಎಸ್.ಮಠ, ಎ.ಎಸ್. ಲಿಗಾಡೆ ಮತ್ತು ಡಿ.ವಾಯ್.ನೀಲನಾಯಕರನ್ನು ಸನ್ಮಾನಿಸಲಾಯಿತು.
ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಂಡಲ್ಲಿ ಉತ್ತಮಚಾರಿತ್ರ್ಯ ಸಾಧ್ಯ.ಚಾರಿತ್ರ್ಯವಂತರಿಂದ ಒಳ್ಳೆಯ ಸಮಾಜ ನಿರ್ಮಾಣ ಮಾಡಬಹುದು. ವಿದ್ಯಾರ್ಥಿಗಳಿಗೆ ಜೀವನದಲ್ಲಿಉದಾತ್ತಗುರಿ ಬೇಕು.ಅದನ್ನು ಪರಿಶ್ರಮದಿಂದ ಸಾಕಾರಗೊಳಿಸಿಕೊಳ್ಳಬೇಕು. ಉತ್ತಮ ಆದರ್ಶಗಳಿಂದ ಸಮಾಜಕ್ಕೆ ಆಸ್ತಿಯಾಗಬೇಕು. ಈ ವರ್ಷದಿಂದ ಸಂಸ್ಥೆಯಲ್ಲಿ ಬಿಸಿಎ ಪ್ರಾರಂಭವಾಗಿದ್ದುಆಸಕ್ತರುಇದರ ಪ್ರಯೋಜನ ಪಡೆಯಬೇಕುಎಂದರು.
ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಡಾ.ಎಸ್.ಎಸ್.ಹಂಗರಗಿ ಪರಿಚಯಿಸಿದರು. ಸಂಯೋಜಕಎಚ್.ಎಸ್.ಗಿಡಗಂಟಿ ವರದಿ ವಾಚನ ಮಾಡಿದರು. ಡಾ.ವಿ.ಎಸ್.ಮಠ, ಎ.ಎಸ್. ಲಿಗಾಡೆ ಮತ್ತು ನೀಲನಾಯಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಆಸ್ಮಾ ನದಾಫ್ ವಂದಿಸಿದರು. ಉಪನ್ಯಾಸಕಎಂ.ಡಿ.ಕೋರವಾರ ನಿರೂಪಿಸಿದರು.
ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ,ಕಾಲೇಜು ಉಪವಿಭಾಗದಅಧ್ಯಕ್ಷ ಡಾ.ಪಿ.ಆರ್.ಜೋಶಿ ವೇದಿಕೆ ಮೇಲಿದ್ದರು. ಉಪಾಧ್ಯಕ್ಷಜಿ.ಎನ್.ಕುಲಕರ್ಣಿ,ಜಂಟೀ ಕಾರ್ಯದರ್ಶಿ ಎಸ್.ಬಿ.ಪರ್ವತೀಕರ,ನಿವೃತ್ತ ಪ್ರಾಧ್ಯಾಪಕರಾದ ಎಂ.ಎನ್.ಪುರಾಣಿಕ,ಜಿ.ಜೆ.ಮೊರಬ,ಡಾ.ಪಿ.ಎಸ್.ಹುಯಿಲಗೋಳ,ಡಾ.ಆರ್.ಆರ್.ದೇಶಮುಖ, ಡಾ.ಎಸ್.ಜಿ.ನಾವಲಗಿ, ಉಮೇಶ ಹಂಪಿಹೊಳಿ ಮತ್ತಿತರರುಇದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.