ಜ್ಞಾನಸಂಪತ್ತಿನಲ್ಲಿ ಭಾರತ ವಿಶ್ವಗುರು
ಬಾಗಲಕೋಟೆ,ಆ.12: ಜ್ಞಾನ ಸಂಪತ್ತಿನಲ್ಲಿ ಭಾರತ ವಿಶ್ವಗುರುವಾಗಿದ್ದು, ಭಾರತೀಯ ಜ್ಞಾನ ಪರಂಪರೆಯನ್ನು ಇಂದಿನ ಜ್ಞಾನ ಪರಂಪರೆಯ ಜೊತೆಗೆ ಸಮನ್ವಯಗೊಳಿಸಿ, ನಮ್ಮ ಸಮಸ್ಯೆ ಸವಾಲುಗಳು ಮತ್ತು ಜ್ಞಾನಶಾಖೆಗಳಿಗೆ ಹೊಸ ಬೆಳಕನ್ನು ನೀಡಬೇಕಾದ ಅಗತ್ಯತೆ ಇದೆ ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.
ಅವರು ನಗರದ ಬಿ.ವ್ಹಿ.ವ್ಹಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಂಶೋಧನಾ ಅಭಿವೃದ್ಧಿ ಘಟಕ ಮತ್ತು ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸಂಘದ ನೂತನ ಸಭಾಭವನದಲ್ಲಿ ನಡೆದ ಬಹುಶಿಸ್ತೀಯ ಸಂಶೋಧನೆಯಲ್ಲಿ ಭಾರತೀಯ ಜ್ಞಾನ ಸಂಪತ್ತು ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತಾವಿಕ ಮಾತನಾಡಿದ ಭಾರತದ ಪ್ರಮುಖ ಎಂ.ಎನ್.ಸಿ.ಯ ಮುಖ್ಯ ಕಾರ್ಯತಂತ್ರ ಅಧಿಕಾರಿಗಳಾದ ಸುಬ್ರಹ್ಮಣ್ಯಂ ಚಿದಂಬರಂ ಭಾರತದ ಶಿಕ್ಷಣವು ಅಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ನಂಬಿಕೆ, ಆಚಾರ,ವಿಚಾರ ಸಂಸ್ಕೃತಿ ಹಾಗೂ ನೈತಿಕ ನಿಯಮಗಳನ್ನು ಜೀವಂತವಾಗಿ ಉಳಿಸಿವೆ, 500 ವರ್ಷದ ಹಿಂದಿನ ರೀತಿ- ನೀತಿಗಳು ಬೇರೆಯಾಗಿದ್ದು, ಇಂದು ನಾವು ವಾಸ್ತವಿಕವಾಗಿ ಇರುವ ಸಮಾಜವು ಬಹಳ?ಷ್ಟು ಬದಲಾವಣೆ ಹೊಂದಿದೆ. ಇಂದು ಶಿಕ್ಷಣವು ಕೇವಲ ಶೈಕ್ಷಣಿಕ ಹಂತಕ್ಕೆ ಮಾತ್ರ ಸೀಮಿತವಾಗದೆ ಬದುಕು ರೂಪಿಸಿಕೊಳ್ಳಲು ಆಸರೆಯಾಗಬೇಕೆಂದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ ಅವರು ಮಾತನಾಡಿ ಇಂದಿನ ಆಧುನಿಕತೆಯ ತಂತ್ರಜ್ಞಾನದ ಯುಗದಲ್ಲಿ ಹೆಚ್ಚಿನ ಸಾಧನೆಗಾಗಿ ವಿದ್ಯಾರ್ಥಿಗಳು ತಮ್ಮ ಕ್ರೀಯಾಶೀಲರಾಗಿ ತಮ್ಮ ಕೌಶಲ್ಯಗಳ ಮೂಲಕ ಉದ್ಯೋಗವಂತರಾಗಬೇಕು ಎಂದರು.
ಉನ್ನತ ಶಿಕ್ಷಣದ ಮುಖ್ಯ ಸಲಹೆಗಾರರಾದ ಡಾ.ಮೀನಾ ಚಂದಾವರಕರ್, ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಸದಸ್ಯರಾದ ಎಸ್.ಆರ್.ಮನಹಳ್ಳಿ, ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅವಿತಾ ಮಾರಿಹಾಳ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಸಂಶೋಧನಾ ಲೇಖನಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಉಪ ಕುಲಪತಿಗಳಾದ ಪ್ರೊ.ಬಿ.ಕೆ.ತುಳಸಿಮಾಲಾ ಅವರನ್ನು ಮಹಾವಿದ್ಯಾಲಯದಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಚಾರ್ಯರಾದ ಎಸ್.ಜೆ.ಒಡೆಯರ ಸ್ವಾಗತಿಸಿದರು, ಪಿ.ಕೆ.ಚೌಗಲಾ ವಂದಿಸಿದರು, ಪಲ್ಲವಿ ಪಾತ್ರೋಟ ಹಾಗೂ ಎಸ್.ಎಸ್.ಮುರಗೋಡ್ ಕಾರ್ಯಕ್ರಮ ನಿರೂಪಿಸಿದರು.
ನಂತರದ ಗೋಷ್ಟೀ 1ರಲ್ಲಿ ಸ್ಥಳಿಯ ಭಾರತೀಯ ನಿರ್ವಹಣೆ ಪ್ರಾಚೀನ ಗ್ರಹಿಕೆ ಕುರಿತು ಎಂ.ಎನ್.ಸಿಯ ಮುಖ್ಯ ಕಾರ್ಯತಂತ್ರ ಅಧಿಕಾರಿಗಳಾದ ಸುಬ್ರಮಣ್ಯಂ ಚಿದಂಬರಂ ಉಪನ್ಯಾಸ ನೀಡಿದರೆ, ಅಹಾರ ಸಂರಕ್ಷಣೆ ಹಾಗೂ ಪೋಷಣೆ ವಿಭಾಗದ ಮುಖ್ಯಸ್ಥೆ ಪ್ರೊ.ರೇಣುಕಾ ಮೇಟಿ, ಗೋಷ್ಠಿ 2ರಲ್ಲಿ ಪ್ರಾಚೀನ ಗಿಡ ಮೂಲಿಕೆಗಳು ಔಷಶಧಿಯ ಮತ್ತು ಅಹಾರದ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ದೇಶ ಹಾಗೂ ವಿದೇಶದ 54 ಜನರಿಂದ ಸಂಶೋಧನಾ ಪ್ರಬಂಧ ಮಂಡಿಸಲಾಯಿತು,