ಕಾಯಕ – ದಾಸೋಹದ ಮಹತ್ವ ಸಾರಿದ ಶರಣ ಹುಗಾರ ಮಾದಯ್ಯ : ಪ್ರೊ ಯಶವಂತರಾಯ ಅಷ್ಠಗಿ
ಕಲಬುರಗಿ:ಆ.೧೨: ೧೨ ನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರುವ ಮೂಲಕ ಕಾಯಕದಲ್ಲಿ ಕೈಲಾಸ ಕಂಡವರು ಶರಣ ಹುಗಾರ ಮಾದಯ್ಯನವರು ಎಂದು ಕೃಷಿ ಶ್ರೀ ಪುರಸ್ಕೃತ ಸಾಹಿತಿ ಪ್ರೊ|| ಯಶವಂತರಾಯ ಅಷ್ಠಗಿ ಹೇಳಿದ್ದಾರೆ.
ಶಿವಬಸವ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಶರಣ ಹೂಗಾರ ಮಾದಯ್ಯ ಯುವ ಸಂಘ ರಾಜಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ರಾಜಾಪುರ ಬಡಾವಣೆಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಶರಣ ಹುಗಾರ ಮಾದಯ್ಯ ನವರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಶರಣ ಹೂಗಾರ ಮಾದಯ್ಯನವರು ಕಲ್ಯಾಣದ ಅನುಭವ ಮಂಟಪದ ಮಹಾಮನೆಯ ಏಳುನೂರಾ ಎಪ್ಪತ್ತು ಅಮರಗಣಂಗಳಲ್ಲಿ ಒಬ್ಬರಾಗಿದ್ದೂ, ಇವರ ಕುರಿತಾಗಿ ನಮಗೆ ಭೀಮ ಕವಿಯ ಬಸವ ಪುರಾಣ, ಸಿದ್ದಯ್ಯ ಪುರಾಣಿಕರ ‘ಶರಣರ ವಚನಾಮೃತ’ ಹಾಗೂ ಅಕ್ಕ ಡಾ.ಅನ್ನಪೂರ್ಣ ತಾಯಿಯವರ “ಜಾನಪದದಲ್ಲಿ ಶರಣರು” ಎನ್ನುವ ಸಾಹಿತ್ಯ ಕೃತಿಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ. ಆದಾಗ್ಯೂ ಕಾಯಕಯೋಗಿ ಶರಣ ಹುಗಾರ ಮಾದಯ್ಯ ನವರ ಕುರಿತು ಆಮೂಲಾಗ್ರ ಸಂಶೋಧನೆ ನಡೆಯಬೇಕು ಎಂದು ಪ್ರೊ ಯಶವಂತರಾಯ ಅಷ್ಠಗಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಡಾ ಕೆ ಗಿರಿಮಲ್ಲ ಅವರು ಮಾತನಾಡಿ , ‘ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಪೊಣಿಸಿದ ದಾರದಂತೆ ಬಾಳಬೇಕು. ಸಹನೆ, ತಾಳ್ಮೆ ಎಲ್ಲರಲ್ಲೂ ಇರಬೇಕು. ಶರಣ ಹೂಗಾರ ಮಾದಯ್ಯ ನವರು ೧೨ ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಶರಣರಿಗೆ ಹೂವು ಪೂರೈಸುವ ಕಾಯಕ ಕೈಗೊಂಡಿದ್ದರು’ ಎಂದರು.
ನದಿ ಸಿನ್ನೂರಿನ ಶರಣ ಹುಗಾರ ಮಾದಯ್ಯ ಮಹಾಶಕ್ತಿ ಪೀಠದ ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ಶರಣ ಹುಗಾರ ಮಾದಯ್ಯ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಹೂಗಾರ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ ಎಪಿಎಂಸಿ ಯ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಪತ್ರಕರ್ತ ಹಾಗೂ ಕಲಬುರಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ, ಮಾತನಾಡಿದರು. ಯುವ ಮುಖಂಡ ರವಿ ಹಾಗರಗಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಸಂಚಾಲಕ
ಮಲ್ಲಿನಾಥ ಹೂಗಾರ್ ರಾಜಾಪುರ ಸ್ವಾಗತಿಸಿದರು, ಜಾನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ ನಿರೂಪಿಸಿದರು.
ಗುರುಸಿದ್ದ ಹುಗಾರ ವಂದಿಸಿದರು.
ಹೂಗಾರ ಸಮಾಜದ ಮುಖಂಡರಾದ ಹಣಮಂತರಾವ್ ಹುಗಾರ ಕುರಿಕೋಟಾ, ಶಿವಕುಮಾರ್ ಹುಗಾರ ರಾಜಾಪುರ, ಗುರುಸಿದ್ದ ಹುಗಾರ, ರಾಜೇಂದ್ರ ಹುಗಾರ, ಮಲಕಣ್ಣ ಹುಗಾರ, ಶಂಕರೆಮ್ಮ ಹುಗಾರ,ಮಲಕಮ್ಮ ಹುಗಾರ, ಸಂಗೀತಾ ಹುಗಾರ ಸೇರಿದಂತೆ ಹುಗಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.