ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸೂರ್ಯವಂಶಿ
ಕಲಬುರಗಿ,ಆ.೧೨- ಬಿಸಿಲು ನಾಡು ಕಲಬುರಗಿಯಲ್ಲಿ ಪ್ರತಿವರ್ಷ ಬಿಸಿಲಿನ ಪ್ರಖರತೆ ಮತ್ತು ಧಗೆ ಹೆಚ್ಚುತ್ತಿದ್ದು, ಇದರಿಂದ ಉಳಿಯಲು ಅತಿಹೆಚ್ಚು ಹೆಚ್ಚಾಗಿ ಗಿಡಮರಗಳನ್ನು ಬೆಳೆಸಲು ನಾಗರಿಕರು ಮುಂದಾಗಬೇಕು ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಮನವಿ ಮಾಡಿದರು.
ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಿನ್ನೆ ರವಿವಾರ “ಕಲಬುರಗಿ ಅಭಿವೃದ್ಧಿಪರ ಸಮಿತಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಿತಿ ಅಧ್ಯಕ್ಷ ಅಧ್ಯಕ್ಷ ಲೂಯಿಸ್ ಕೋರಿ ಅವರು, ಮಾತನಾಡಿ ಗಿಡಮರಗಳನ್ನು ರಕ್ಷಿಸುವುದರ ಜತೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಎಲ್ಲರೂ ಸಮೂಹಿಕವಾಗಿ ಕೈಜೋಡಿಸಿದ್ದಲ್ಲಿ ಬೇಸಿಗೆಯ ಬಿಸಿಲಿನ ಧಗೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದರು.
ಗದ್ದಗಿ ಮಠದ ಪೂಜ್ಯರು ಸಾನಿಧ್ಯ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಂದುಸ್ಥಾನಿ ಚರ್ಚ್ ಫಾದರ ಸಾಮುವೇಲ್, ಖಾಜಿ ರಿಜ್ವಾನ್ ಸಾಬ್, ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಧ್ಯಕ್ಷರಾದ ದೇಶಮುಖ ಮತ್ತು ಕಲಬುರಗಿ ಅಭಿವೃದ್ಧಿಪರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.