ಕನ್ನಡ ಉಳಿಸಿ ಬೆಳಸುವ ಕಾರ್ಯವಾಗಲಿ
ಸಂಜೆವಾಣಿ ವಾರ್ತೆ
ಕೆಂಭಾವಿ:ಆ.೧೨:ಕನ್ನಡ ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನದು ಆಗಿರಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೆಂಭಾವಿಯ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಡಿವಾಳಪ್ಪ ಪಾಟೀಲ ಹಾಗೂ ಜಿಲ್ಲಾ ಉತ್ತಮ ವರದಿಗಾರ ಪ್ರಶಸ್ತಿಗೆ ಭಾಜನರಾದ ಡಿ.ಸಿ.ಪಾಟೀಲ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೆ ಆದ ಗೌರವ, ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕಾಗಿ ಅನೇಕರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಸಗರನಾಡಿನಲ್ಲಿ ಶ್ರೇಷ್ಠಾತಿ ಶ್ರೇಷ್ಠ ಕವಿಗಳು, ಸಾಹಿತಿಗಳು ಆಗಿ ಹೋಗಿದ್ದಾರೆ. ಸಾಹಿತ್ಯ ವಲಯಕ್ಕೆ ಈ ಭಾಗ ತನ್ನದೆ ಆದ ಶಕ್ತಿಯನ್ನು ತುಂಬಿದೆ. ನೂತನ ಅಧ್ಯಕ್ಷ ಮಡಿವಾಳಪ್ಪ ಅವರು ಈ ಭಾಗದ ಸಾಹಿತಿಗಳಿಗೆ ಒಳ್ಳೆಯ ವೇದಿಕೆಗಳನ್ನು ಒದಗಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ನಿಂಗನಗೌಡ ಮಾಲಿಪಾಟೀಲ, ಸಂಗಣ್ಣ ತುಂಬಗಿ, ರಮೇಶ ಸೊನ್ನದ, ಗುರುಮೂರ್ತಿ ಪತ್ತಾರ, ಮಲ್ಲನಗೌಡ ಪಾಟೀಲ, ಭೀಮನಗೌಡ ಕಾಚಾಪುರ, ಶ್ರೀಶೈಲ ಆಲ್ದಾಳ, ರಫೀಕ ವಡಕೇರಿ, ಬಸವರಾಜ ತಳವಾರ, ನಂದಪ್ಪ, ಹಳ್ಳೆಪ್ಪ ಕವಲ್ದಾರ, ಸತ್ಯರಾಜ ಮಾಳನೂರ, ಚಂದ್ರು ಕವಲ್ದಾರ, ಸುಖಮುನಿ ಬಡಿಗೇರ, ಮಲ್ಲೇಶಪ್ಪ ಕಾಚಾಪುರ, ಶಿವು ಮಾಲಿಪಾಟೀಲ, ಚಂದ್ರಮೌಳಿ, ಶ್ರೀಕಾಂತ ಅಂಗಡಿ, ಗುರುರಾಜ ಕುಲಕರ್ಣಿ, ಕುಮಾರ ಕಾಚಾಪುರ, ರಾಚಾಪ್ಪ ಕುಂಬಾರ ಸೇರಿದಂತೆ ಅನೇಕರಿದ್ದರು.
ಶಿವನಗೌಡ ಪಾಟೀಲ ನಿರೂಪಿಸಿದರು.