ಜನಮುಖಿ ಕೆಲಸ ಕಾರ್ಯ ಕೈಗೊಳ್ಳಲಿ
ಕಲಬುರಗಿ:ಆ.೧೨: ಸಾಮಾಜಿಕ ಕಳಕಳಿಯೊಂದಿಗೆ ಜನ್ಮತಳೆದಿರುವ ವಿನ್ನಸ್ ಅಕಾಡೆಮಿಯು ಜನಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಮಹಾನಗರ ಪಾಲಿಕೆಯ ಮೇಯರ್ ಯಲ್ಲಪ್ಪ ನಾಯಿಕೋಡಿ ಹೇಳಿದರು.
ನಗರ ಹೊರವಲಯದ ಹೈಕೋರ್ಟ್ ಸಮೀಪದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಿನಸ್ ಏಜುಕೇಷನಲ್ ಅಕಾಡೆಮಿ ಮತ್ತು ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲವೂ ಸರ್ಕಾರದ ಮೇಲೆ ಮೇಲೆ ಅವಲಂಬಿತರಾಗದೆ ಸಂಘ-ಸAಸ್ಥೆಗಳಲ್ಲು ಸಹ ಸಮಾಜದ ಸ್ವಾಸ್ತö್ಯ ಕಾಪಾಡುವ ನಿಟ್ಟಿನಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಲಿ. ಈ ದಿಸೆಯಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆಯಾಗಿ ಸಂಘ ಸಂಸ್ಥೆಗಳು ತಮ್ಮ ಕಾರ್ಯಯೋಜನೆ ರೂಪಿಸಿಕೊಂಡು, ಕಾರ್ಯಗತ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ವಿನಸ್ ಗ್ರುಪ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಅಕುಲ್ ಆಚಾರ್ಯ ಅಧ್ಯಕ್ಷತೆವಹಿಸಿದ್ದರು. ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯವಾದಿ ಅಯ್ಯನಗೌಡ ಪಾಟೀಲ್, ಪ್ರಮುಖರಾದ ರಾಜೇಶ ಎಂ, ಶರಣಗೌಡ, ಚಂದ್ರಶೇಖರ ಚಂದಾ, ಕಾಂಗ್ರೆಸ್ ಯುವ ಮುಖಂಡ ಬಸವರಾಜ ಅನವಾರ ಭಾಗವಹಿಸಿದ್ದರು.