ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ:ಕ್ರೀಡಾಪಟು ಬಸವರಾಜ್ ಬಿರಾದಾರ್
ಬೀದರ: ಆ.೧೨:ಸರ್ಕಾರಿ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಭಾಲ್ಕಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಜಯ್ ಕುಮಾರ್ ಸ್ವಾಮಿ ಅವರು ಸುದೀರ್ಘ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆAದು ಬೀದರ್ ಜಿಲ್ಲಾ ಕ್ರೀಡಾಪಟು ಬಸವರಾಜ್ ಬಿರಾದಾರ್ ಅವರು ಹೇಳಿದರು.
ಅವರು ಬೀದರ್ ನಗರದ ಮಹಾದೇವ್ ನಗರದಲ್ಲಿ ಗೆಳೆಯರ ಬಳಗ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಅವರು ಮಾತನಾಡಿದರು, ಶಿಕ್ಷಕರ ವೃತ್ತಿ ಪವಿತ್ರವಾದದ್ದು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ, ಶಿಕ್ಷಕರಿಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಗೌರವ ಕೊಡುವ ಕೆಲಸ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಹಣಮಂತ ನೆಳಗೆ ಅವರು ಮಾತನಾಡಿ, ಶಿಕ್ಷಕ ವಿಜಯ್ ಕುಮಾರ್ ಸ್ವಾಮಿ ಅವರು ಶಿಕ್ಷಕರ ವೃತ್ತಿಯಲ್ಲಿ ತಮ್ಮ ಮಕ್ಕಳಿಗೋಸ್ಕರ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಎಂದು ಬಣ್ಣಿಸಿದರು, ಶಿಕ್ಷಕ ವಿಜಯ್ ಕುಮಾರ್ ಸ್ವಾಮಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಾನು ಶಿಕ್ಷಕ ವೃತ್ತಿಗೆ ಸೇರಿದ್ದೆನೆಂದು ಅವರು ಹೇಳಿದ್ದರು ನಾನು ಶಿಕ್ಷಕ ಹುದ್ದೆಯಿಂದ ನಿವೃತ್ತಿ ಹೊಂದಿದ್ದರೂ ಕೂಡ ಮುಂದೆಯೂ ಕೈಲಾದಷ್ಟು ಸಮಾಜ ಸೇವೆ ಮಾಡುತ್ತೇನೆಂದು ಹೇಳಿದರು ಶಿಕ್ಷಕ ಸೇವೆಯಿಂದ ನಿವೃತ್ತಿಹೊಂದಿದ ವಿಜಯಕುಮಾರ ಸ್ವಾಮಿ ದಂಪತಿಗಳಿಗೆ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು,ಇದೇ ಸಂದರ್ಭದಲ್ಲಿ, ಲಿಂಗರಾಜ್, ಶ್ರೀಮತಿ ಪ್ರಭಾವತಿ, ಶ್ರೀಮತಿ ಲಲಿತಾ, ಶ್ರೀಮತಿ ಉಮಾ, ಶ್ರೀಮತಿ ಸಂತೋಷಿ ಸ್ವಾಮಿ, ಶ್ರೀಮತಿ ಉಜ್ವಲಾ, ಶ್ರೀಮತಿ ಪ್ರಭಾವತಿ ಸೇರಿದಂತೆ ನೂರಾರು ಅಭಿಮಾನಿ ಬಳಗದವರು ಉಪಸ್ಥಿತರಿದ್ದರು