ಸಂಬAಧದ ಬೆಸುಗೆ ಇನ್ನಷು ಗಟ್ಟಿಗೊಳಿಸಿಬೇಕಾಗಿದೆ:ಕಾಮಶೆಟ್ಟಿ ಚಿಕಬಸೆ
s ಬೀದರಃಆ.೧೨: ಅಣ್ಣ-ತಂಗಿಯ ಸಹೋದರತ್ವ ಬಾಂಧವ್ಯ ಬೆಸೆಯುವ ಪ್ರೀತಿಯ ಹಬ್ಬ ರಕ್ಷಾಬಂಧನವಾಗಿದೆ. ಪರಸ್ಪರ ಸಹೋದರತ್ವದ ಕೊಂಡಿ ಬೆಸೆಯುವ ಪ್ರೀತಿಯ ಹಬ್ಬವೇ ರಕ್ಷಾ ಬಂಧನ. ಈ ಪವಿತ್ರವಾದ ಸಂಬAಧ ಬೆಸಯುವ ಹಬ್ಬ ನಾವೆಲ್ಲರೂ ಆಚರಿಸುವ ಮೂಲಕ ಸಂಬAಧದ ಬೆಸುಗೆ ಇನ್ನಷು ಮತ್ತಷ್ಟು ಗಟ್ಟಿಗೊಳಿಸಿಬೇಕಾಗಿದೆ. ಹಬ್ಬದ ಬಾಂಧವ್ಯ ಪ್ರೀತಿ, ಬರೀ ಒಂದು ದಿಸವಕ್ಕಷ್ಟೇ ಸೀಮಿತವಾಗಿರಿಸದೆ ಸಂಬAಧದ ಕೊಂಡಿ ಕಳಚದಂತೆ ಸದಾ ಜಾಗೃತವಹಿಸಬೇಕು ಎಂದು ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ಅವರು ನುಡಿದರು.
ಅವರು ದಿನಾಂಕ ೧೦-೮-೨೦೨೪ ರಂದು ಬೀದರ ನಗರದ ಕುಂಬಾರವಾಡದಲ್ಲಿರುವ ನವೀನ್ ಪಬ್ಲಿಕ್ ಶಾಲೆಯಲ್ಲಿ ಬ್ರಹ್ಮಕುಮಾರಿ ಅಧ್ಯತಿಕ ಕೇಂದ್ರದ ಪಾರ್ವತಿ ಬಹೇನಜಿ ಅವರು ಅಯೋಜಿಸಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಬಹೇನಜಿ ಅವರಿಂದ ರಾಕಿ ಕಟ್ಟಿಸಿಕೊಂಡು ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ, ಬ್ರಹ್ಮಕುಮಾರಿಯ ಅಕ್ಕನವರು ಅಧ್ಯಾತ್ಮಿಕ ಲೋಕದಲ್ಲಿ ಅತ್ಯುನ್ನತ ಸ್ಥಾನಕ್ಕೇರಿದವರು. ಇಂತಹವರಿAದ ರಾಕಿ ಕಟ್ಟಿಸಿಕೊಳ್ಳುವುದು ನನ್ನ ಪುಣ್ಯ ಎಂದರು.
ಪಾರ್ವತಿ ಬಹೇನಜಿ ಅವರು ಮಾತನಾಡಿ ವಿಶ್ವದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾದರೆ ಪ್ರತಿಯೊಬ್ಬರು ದಿನದ ಒಂದಿಷ್ಟು ಸಮಯವಾದರೂ ಅಧ್ಯಾತ್ಮಿಕದಲ್ಲಿ ತೊಡಗಬೇಕು. ಸತ್ಯದರ್ಶನ ಮಾಡಬೇಕು. ಸಾತ್ವಿಕವಾದ ಆಹಾರ ಕ್ರಮ, ಸತ್ಯ ಶುದ್ದ ಕಾಯಕದಿಂದ ಪ್ರಾಮಾಣಿಕವಾಗಿ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಶಾಂತಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗೀತಾ ಬಹೇನಜಿ, ನವೀನ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಶೀಲಾ ಚಿಕಬಸೆ, ಪ್ರಾಂಶುಪಾಲರಾದ ರಾಜಪ್ಪಾ, ನಿರ್ವಾಹಕರಾದ ಸುನೀತಾ ರಾಮಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.