‘ಸೂಫಿಗಳು ಮತ್ತು ಶರಣರು ಸಾಮರಸ್ಯದ ಕೊಂಡಿಗಳು’ : ಡಾ. ಎಂ.ಬಿ. ಕೋರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೨:ಸಾಹಿತ್ಯ ಪರಿಷತ್ ಪರಕೀಯ ಭಾಷೆಗಳ ವ್ಯಾಮೋಹದಲ್ಲಿ ಕನ್ನಡ ಉಳಿಸಲು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿತ್ತು. ಶತಮಾನದ ಸಂಭ್ರಮ ಆಚರಿಸಿಕೊಂಡಿದೆ. ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಪ್ರಸಾರ ಮಾಡುತ್ತ ಬಂದಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಹಳ ತೃಪ್ತಿಕರವಾಗಿ ಕೆಲಸ ಮಾಡುತ್ತಿದೆ ಎಂದು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಬಿ. ಕೋರಿ ಹೇಳಿದರು.
ಭಾನುವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸೈಯದ ಅಹ್ಮದ ವಾರಿಸ್ ಮಿಯಾ ಖಾದ್ರಿ ಫೌಂಡೇಶನ್ ದತ್ತಿ ದಾನಿಗಳು ಸೈಯದ ರಹಿಮಾನ ಎಸ್. ಖಾದ್ರಿ ಮತ್ತು ವಚನ ಗುಮ್ಮಟ ಡಾ. ಫ. ಗು. ಹಳಕಟ್ಟಿ ದತ್ತಿ ದಾನಿಗಳಾದ ಎಸ್.ಎಸ್. ಖಾದ್ರಿ ಇನಾಮದಾರ ದತ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕನ್ನಡ ಸಾಹಿತ್ಯ ಸುದೀರ್ಘ ಇತಿಹಾಸ ಹೊಂದಿದೆ, ಇದನ್ನು ಬೆಳಸಿ ಉಳಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿಷೇಕ ಚಕ್ರವರ್ತಿ ಮಾತನಾಡಿ, ದತ್ತಿ ಕಾರ್ಯಕ್ರಮಗಳನ್ನು ಮಾಡುವದರ ಮೂಲಕ ಕನ್ನಡ ನಾಡಿನ ಶರಣರ ಸಂತರ ಸೂಫಿಗಳ ಜೀವನ ಚರಿತ್ರೆ ಪರಿಚಯಿಸುತ್ತಿರುವುದು ಬಹಳ ಸಂತೋಷ, ಸೂಫಿಗಳ ಮತ್ತು ಸಂತರ ವಿಚಾರಗಳು ಇಂದು ಬಹಳ ಪ್ರಸ್ತುತವಾಗಿದೆ. ನಾವು ಮನುಷ್ಯರಾಗಲು ವಿಶ್ವಕ್ಕೆ ಸಂದೇಶ ಸಾರಿದ ನಾಡು ನಮ್ಮದು, ಜಾತಿ ಮತ ಪಂಥಗಳ ಆಚೆ ಸಾಮರಸ್ಯ ಆಚರಿಸಿದ ಸೂಫಿಗಳು ಮತ್ತು ಶರಣರನ್ನು ಜಗತ್ತಿಗೆ ನೀಡಿದ ಹೆಗ್ಗಳಿಕೆ ವಿಜಯಪುರ ಜಿಲ್ಲೆಗೆ ಸಲ್ಲುತ್ತದೆ. ಇಂದಿನ ಕ್ರೂರ ವ್ಯವಸ್ಥೆ ಸರಿ ಮಾಡಲು ಇಂತಹ ಚಿಂತನ ಗೋಷ್ಠಿಗಳ ಅವಶ್ಯಕತೆ ಇದೆ ಎಂದರು.
ಸೂಫಿಗಳ ಜೀವನ ಹಾಗೂ ಶರಣರ ಸಂಬAಧ ಕುರಿತು ಉಪನ್ಯಾಸ ನೀಡಿದ ಡಾ. ಅಮೀರುದ್ದೀನ ಖಾಜಿ, ಸೂಫಿಗಳು ಮತ್ತು ಶರಣರ ಸಾಮರಸ್ಯದ ನಾಡು ವಿಜಯಪುರ, ಹಾಸಿಂಪೀರ ದರ್ಗಾ, ಖಾಜಾಅಮೀನ ದರ್ಗಾ, ಗಂಜ ದರ್ಗಾದ ಸೂಫಿ ಜೋಡಗುಮ್ಮಟ, ಮುರ್ತುಜ ಖಾಜಿ ದರ್ಗಾದ ಸಂತರು ನಾಡಿನ ತುಂಬಾ ಸಾಮರಸ್ಯ ಹರಡಿದ ಮಹಾನ ಚೇತನಗಳು. ಎಲ್ಲವನ್ನೂ ಕೊಟ್ಟ ವಿಶ್ವ ಚೇತನ ಭಗವಂತನ ಅಡಿಯಲ್ಲಿ ನಾವೆಲ್ಲರೂ ಸಮಾನರು, ವಿಶ್ವಕ್ಕೆ ಶಾಂತಿ ಸಾಮರಸ್ಯ ಸಾರಿದ ಕೀರ್ತಿ ನಮ್ಮ ವಿಜಯಪುರ ಸೂಫಿಗಳಿಗೆ ಸಲ್ಲುತ್ತದೆ ಎಂದರು .
ಡಾ. ಫ.ಗು. ಹಳಕಟ್ಟಿ ಅವರ ಬದುಕು ಸಾಧನೆ ಕುರಿತು ಪ್ರೊ. ಸುಭಾಸಚಂದ್ರ ಕನ್ನೂರ ಮಾತಾನಾಡಿ, ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ವಿಜಯಪುರಕ್ಕೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಹಕಾರ ಕ್ಷೇತ್ರ, ಬ್ಯಾಂಕುಗಳು ಸ್ಥಾಪನೆ ಮಾಡಿದ ಶ್ರೇಯಸ್ಸು ಡಾ. ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಡಾ. ಹಳಕಟ್ಟಿ ತೀರ ಬಡತನದಲ್ಲಿಯೂ ವಚನಗಳ ಉಳಿಸಿ ಪ್ರಕಟಿಸುವ ಕಾರ್ಯ ಮಾಡಿದವರಾಗಿದ್ದಾರೆ. ಹಳಕಟ್ಟಿ ಅವರ ಜೀವನವೇ ಫಕೀರ್ ಆಗಿದೆ. ಇಂದು ವಚನ ಸಾಹಿತ್ಯ ಉಳಿದಿದೆ ಎಂದರೆ ಅದು ಡಾ. ಫ.ಗು. ಹಳಕಟ್ಟಿಯವರ ತ್ಯಾಗದ ಫಲ ಎಂದರು.
ದತ್ತಿಗಳ ದಾನಿಗಳಾದ ಎಸ್.ಎಸ್. ಖಾದ್ರಿ ಇನಾಮದಾರ ಮತ್ತು ಮಹಿಳಾ ವಿಶ್ವವಿದ್ಯಾಲಯದ ಆಪ್ತ ಸಮಾಲೋಚಕಿ ಭಾರತಿ ಪಾಟೀಲ ಸೂಫಿ ಶರಣರ ಕುರಿತು ಮಾತನಾಡಿದರು. ವೇದಿಕೆ ಮೇಲೆ ಅಲಿಸಾಬ ಖಡಕೆ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸಿದ್ದರಾಮಯ್ಯ ಲಕ್ಕುಂಡಿಮಠ, ಶಶಿಕಾಂತ ಮೆಂಡೆಗಾರ, ಶಿವಲೀಲಾ ಕೋರವಾರ, ರೂಪಾ ರಜಪೂತ, ಪ್ರಕಾಶ ಬೆಣ್ಣೂರ, ಅಮರನಾಥ ಹಿರೇಮಠ, ನಾರಾಯಣ ಮಾಯಾಚಾರಿ, ಅಂಬಾಜಿ ಘೋರ್ಪಡೆ, ಪರಶುರಾಮ ಕೊಣ್ಣೂರ, ಡಿ.ಬಿ. ಕುಪ್ಪಸ್ತ, ಅಸ್ಲಂ ಮುಲ್ಲಾ, ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿತು.
ಮಮತಾ ಮುಳಸಾವಳಗಿ ಸ್ವಾಗತಿಸಿದರು, ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಶಿಲ್ಪಾ ಭಸ್ಮೆ ನಿರೂಪಿಸಿದರು, ಮಹಮ್ಮದ್ ಗೌಸ ಹವಾಲ್ದಾರ್ ಸಾಧಕರನ್ನು ಪರಿಚಯಿಸಿದರು. ಕೆ.ಎಸ್. ಹಣಮಾಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಧಿಕಾರಿಗಳಾದ ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಆಶಾ ಬಿರಾದಾರ, ರಾಜೇಸಾಬ ಶಿವನಗುತ್ತಿ, ಡಾ. ಎಂ. ಎಸ್. ಮಾಗಣಗೇರಿ, ಜಿ.ಎಸ್. ಬಳ್ಳೂರ, ಗಂಗಮ್ಮಾ ರಡ್ಡಿ, ಲತಾ ಗುಂಡಿ, ಶರಣಗೌಡ ಪಾಟೀಲ, ಯು. ಎನ್. ಕುಂಟೋಜಿ, ಡಾ ಬಸವರಾಜ ಹಿರೇಮಠ, ಅಶೋಕ ಶಿರಗುಪ್ಪಿ, ಎಸ್.ಐ ಬಿರಾದಾರ, ಶ್ರೀಕಾಂತ ನಾಡಗೌಡ, ಎ.ಡಿ. ಮುಲ್ಲಾ, ಅಮೋಘಸಿದ್ಧ ಪೂಜಾರಿ, ಮಹಾದೇವಿ ತೆಲಗಿ, ರಮೇಶ ಜಾಧವ, ಭಾಗೀರಥಿ ಸಿಂಧೆ. ಶೋಭಾ ಬಡಿಗೇರ, ಶಾಂತಾ ವಿಭೂತಿ ಮುಂತಾದವರು ಉಪಸ್ಥಿತರಿದ್ದರು.