ಕೈ ಮುಗಿಯುವೇ ಹೋಗಬೇಡಿ ಸರ್
ಕೊಲ್ಹಾರ:ಆ.೧೨: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರಾದ ಬಿ ಎಸ್ ಹಾವಳಗಿ ಅವರು ವರ್ಗಾವಣೆ ಹೊಂದಿದ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಮಕ್ಕಳ ಅನಿಸಿಕೆ ವ್ಯಕ್ತಪಡಿಸುವ ಸಂದರ್ಭದಲ್ಲಿ ಕುಮಾರಿ ಸಾವಿತ್ರಿ ಸೊನ್ನದ ಎಂಬ ವಿದ್ಯಾರ್ಥಿನಿ ವೇದಿಕೆ ಮೇಲೆ ಇದ್ದ ಎಲ್ಲಾ ಗುರುಹಿರಿಯರಿಗೆ ಕೈ ಮುಗಿದು ಕಣ್ಣೀರು ಸುರಿಸುತ್ತಾ ನೆಚ್ಚಿನ ಗುರುಗಳಿಗೆ ಕೈ ಮುಗಿಯುವೆ ಸರ್ ಹೋಗಬೇಡಿ ಎನ್ನುವ ಸಂದರ್ಭ ವೇದಿಕೆ ಮೇಲಿದ್ದ ಗಣ್ಯರ ಕಂಗಳು ಒದ್ದೆಯಾದವು.
ಈ ಮಕ್ಕಳ ಗುರುವಿನ ಭಕ್ತಿ ಕಂಡು ಊರಿನ ಜನ ಮರುಗಿದರು.ಆ ಶಿಕ್ಷಕರಿಗೆ ಊರಿನ ಜನ ಸನ್ಮಾನಿಸಿ ಬೀಳ್ಕೊಟ್ಟಿತು. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ರೂಪಾ ಸುರೇಶ ಗಿಡ್ಡಪ್ಪಗೋಳ.ಮುಖ್ಯಗುರುಮಾತೆ ಕೆ ಆರ್ ದಾಸರ ಉಪಾಧ್ಯಕ್ಷರಾದ ಪುಂಡಲೀಕ ಬೆಳ್ಳುಬ್ಬಿ ಮಾರುತಿ ಪವಾರ ಮಂಜುನಾಥ ತುಮ್ಮರಮಟ್ಟಿ ಬಾಬು ಭಜಂತ್ರಿ ಲಕ್ಷ್ಮಣ ಕುಂಬಾರ ಜಿ ಆಯ್ ಗುಡ್ಯಾಳ ಕಾಶಿಬಾಯಿ ಬಾಲಗೊಂಡ.ಹೊನ್ನಪ್ಪ ಹಡಪದ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.