ಲಘು ಭೂಕಂಪನ ಸ್ಥಳಕ್ಕೆ : ಮಾಜಿ ಸಚಿವ ರಾಜಶೇಖರ್ ಪಾಟೀಲ್ ಭೇಟಿ
ಸಂಜೆವಾಣಿ ವಾರ್ತೆ
ಹುಮನಾಬಾದ : ಆ.೧೨:ಗ್ರಾಮದಲ್ಲಿ ಶನಿವಾರದಲ್ಲಿ ಜರುಗಿದ ಭೂಮಿಯ ಕಂಪನಕ್ಕೆ ಹೆದರುವ ಅವಶ್ಯಕತೆ ಇಲ್ಲಾ ಗ್ರಾಮಸ್ಥರು ಧೈರ್ಯ ದಿಂದ ವಾಸಿಸಬೇಕೆಂದು ಮಾಜಿ ಸಚಿವರಾದ ರಾಜಶೇಖರ ಬಿ.ಪಾಟೀಲ ರವರು ವಿಧಾನ ಪರಿಷತ ಸದಸ್ಯರಾದ ಭೀಮರಾವ ಬಿ ಪಾಟೀಲ್ ರವರು ಜಂಟಿಯಾಗಿ ರವಿವಾರ ಹುಮನಾಬಾದ ಮತ ಕ್ಷೇತ್ರದ ಸಿತಾಳಗೇರಾ ಗ್ರಾಮದಲ್ಲಿ ಭೂಕಂಪನ ಸಂಭವಿಸಿದ ಸುದ್ದಿ ತಿಳಿದು,
ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಜೊತೆ ಸಮಾಲೋಚನೆ ನಡೆಸಿ, ಭೂಕಂಪನದಿAದ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ಪಡೆದರು ಹಾಗೂ ಅವರಿಗೆ ಸಮಾಧಾನ ಹೇಳಿ, ಸಂಬAಧಪಟ್ಟ ಅಧಿಕಾರಿಗಳಿಗೆ ಮಾತನಾಡಿ ಗ್ರಾಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂಧರ್ಬದಲ್ಲಿ ಉಪತಹಸಿಲ್ದಾರ ಹಾವಗಿರಾವ ಮುದೋಳೆ ಕಂದಾಯ ನೀರಕ್ಷಕರಾದ ರಾಹುಲ್ ದೇವ ಪ್ರಸಾದ ರವರು ಸೇರಿದಂತೆ ಗ್ರಾಮಸ್ಧರು ಮುಖಂಡರು ಉಪಸ್ಥಿತರಿದ್ದರು.