ಕರಾಟೆ; ಪ್ರಾಪ್ತಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಪುತ್ತೂರು;  ಬೆಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಟೂರ್ನಮೆಂಟ್ ನಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಪ್ತಿ ಶೆಟ್ಟಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ, ಆಶಾ ಮತ್ತು ಗಿರೀಶ್ ಶೆಟ್ಟಿ ಇವರ ಸುಪುತ್ರಿಯಾಗಿದ್ದು ಇವರಿಗೆ ಸೆನ್ಸಾಯಿ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ಸುರೇಶ್, ದಿಲೀಪ್, ರೋಹಿತ್, ನಿಖಿಲ್, ನಿವೇದಿತಾ ಮತ್ತು ರೋಶಿನಿ ಅವರು ತರಬೇತಿ ನೀಡಿರುತ್ತಾರೆ.