ಸುಕ್ಷೇತ್ರ ಸುಗೂರೇಶ್ವರ ದೇವಸ್ಥಾನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ
ಸೈದಾಪುರ:ಆ.೧೨:ವಿವಿಧ ಗ್ರಾಮಗಳ ಭಕ್ತಾಧಿಗಳು ಸುಕ್ಷೇತ್ರ ದೇವಸುಗೂರ ಸುಗೂರೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ಪವಿತ್ರ ದಿನಗಳಂದು ಸಾಕಷ್ಟು ಸಂಖ್ಯೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾದಗಿರಿಯಿಂದ ದೇವಸೂಗುರಗೆ ಪಾದಯಾತ್ರೆ ಮಾಡುವ ಭಕ್ತಾಧಿಗಳು ಸೈದಾಪುರ ಮಾರ್ಗ ಮಧ್ಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡುತ್ತಾ, ಪ್ರತಿ ವರ್ಷದಂತೆ ಈ ವರ್ಷ ಪಾದಯಾತ್ರೆ ಮಾಡುತ್ತಿದ್ದೇವೆ. ವರ್ಷ ತುಂಬಾ ಕೆಲಸ ಮಾಡಿ ಭಾರವಾದ ಮನಸ್ಸಿಗೆ ದೇವರ ಧ್ಯಾನದೊಂದಿಗೆ ಕೆಲ ಸಮಯ ಕಳೆಯುವದರಿಂದ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಜನತೆಗೆ ಭಗವಂತ ಉತ್ತಮ ಆರೋಗ್ಯ ದಯಪಾಲಿಸಲಿ. ಪ್ರತಿಯೊಬ್ಬರಿಗೂ ಬದುಕುವ ಆತ್ಮಸ್ಥೆöÊರ್ಯ ಕಲ್ಪಿಸುವಂತಾಗಲಿ ಎಂದು ಅಭಿಪ್ರಾಯಪಟ್ಟರು.